2021 ರಲ್ಲಿ ಟಿ 20 ವಿಶ್ವಕಪ್ ನಡೆಯಲಿದೆ. ಭಾರತ, ಯಾವ ಆಟಗಾರರೊಂದಿಗೆ ಆಡಲಿದೆ ಎಂಬುದು ಮುಂದಿನ ಒಂದು ವಾರದಲ್ಲಿ ತಿಳಿಯಲಿದೆ. ವರದಿಗಳ ಪ್ರಕಾರ, ಅಕ್ಟೋಬರ್ 17 ರಿಂದ ಓಮನ್ ಮತ್ತು ಯುಎಇಯಲ್ಲಿ ಆರಂಭವಾಗಲಿರುವ ಟಿ 20 ವಿಶ್ವಕಪ್ ಗಾಗಿ ಭಾರತೀಯ ತಂಡವನ್ನು ಇಂಗ್ಲೆಂಡ್ ಕೊನೆ ಟೆಸ್ಟ್ ನಂತ್ರ ಪ್ರಕಟಿಸಲಾಗುವುದು ಎನ್ನಲಾಗ್ತಿದೆ.
ಸೆಪ್ಟೆಂಬರ್ 7 ರಂದು ಟಿ-20 ವಿಶ್ವಕಪ್ ಗೆ ಟೀಂ ಇಂಡಿಯಾ ಘೋಷಣೆಯಾಗಲಿದೆ ಎಂದು ಮೂಲಗಳು ಹೇಳಿವೆ. ಐಪಿಎಲ್ 2021 ರ ಪ್ರದರ್ಶನ, ಟಿ-20 ವಿಶ್ವಕಪ್ ತಂಡದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂಬುದು ಸ್ಪಷ್ಟವಾಗಿದೆ. ಆಯ್ಕೆಗಾರರು ಮತ್ತು ಟೀಮ್ ಇಂಡಿಯಾ ಮ್ಯಾನೇಜ್‌ಮೆಂಟ್ ಈಗಾಗಲೇ ತಮ್ಮ ಆಟಗಾರರನ್ನು ನಿರ್ಧರಿಸಿದೆ ಎನ್ನಲಾಗ್ತಿದೆ.
ಮಾಧ್ಯಮ ವರದಿಗಳ ಪ್ರಕಾರ, ಭಾರತ ತಂಡ ಟಿ 20 ವಿಶ್ವಕಪ್ ಗೆ 15 ಆಟಗಾರರನ್ನು ಆಯ್ಕೆ ಮಾಡುತ್ತದೆ. ಇದಲ್ಲದೇ 3 ಮೀಸಲು ಆಟಗಾರರನ್ನು ಕೂಡ ತನ್ನ ಜೊತೆ ಇರಿಸಿಕೊಳ್ಳಲಿದೆ.
ಅಕ್ಟೋಬರ್ 24 ರಿಂದ ಶುರುವಾಗುವ ಟಿ-20 ವಿಶ್ವಕಪ್ ನಲ್ಲಿ, ಭಾರತ ತಂಡ ತನ್ನ ಮೊದಲ ಪಂದ್ಯವನ್ನು ಪಾಕಿಸ್ತಾನದ ವಿರುದ್ಧ ಆಡಲಿದೆ. ಇದರ ನಂತರ ಭಾರತ, ಅಕ್ಟೋಬರ್ 31 ರಂದು ನ್ಯೂಜಿಲ್ಯಾಂಡ್ ವಿರುದ್ಧ, ಅಫ್ಘಾನಿಸ್ತಾನದ ವಿರುದ್ಧ ನವೆಂಬರ್ 3ರಂದು ಆಡಲಿದೆ.