ಟಿ-20 ವಿಶ್ವಕಪ್ ಮುಕ್ತಾಯಗೊಂಡಿದೆ. ನ್ಯೂಜಿಲ್ಯಾಂಡ್ ತಂಡವನ್ನು 8 ವಿಕೆಟ್ ಗಳಿಂದ ಸದೆಬಡಿದ ಆಸ್ಟ್ರೇಲಿಯಾ, ವಿಶ್ವಕಪ್ ಟ್ರೋಫಿ ಎತ್ತಿ ಹಿಡಿದಿದೆ. ಈ ಮೂಲಕ ಮೊದಲ ಬಾರಿ, ಟಿ-20 ವಿಶ್ವಕಪ್ ಚಾಂಪಿಯ್ ಆಗಿ ಆಸ್ಟ್ರೇಲಿಯಾ ಹೊರಹೊಮ್ಮಿದೆ. ಟ್ರೋಫಿಗೆ ಮುತ್ತಿಟ್ಟ ತಂಡಕ್ಕೆ ಹಣದ ಸುರಿಮಳೆಯಾಗಿದೆ. ವಿಶ್ವ ಚಾಂಪಿಯನ್ ಆಸ್ಟ್ರೇಲಿಯಾಕ್ಕೆ 1.6 ಮಿಲಿಯನ್ ಡಾಲರ್ ಅಂದರೆ ಸುಮಾರು 12 ಕೋಟಿ ರೂಪಾಯಿ ಸಿಕ್ಕಿದೆ. ಫೈನಲ್ ನಲ್ಲಿ ಸೋತರೂ ನ್ಯೂಜಿಲ್ಯಾಂಡ್ ತಂಡಕ್ಕೂ ಕೋಟ್ಯಾಂತರ ರೂಪಾಯಿ ಸಿಕ್ಕಿದೆ.
ನ್ಯೂಜಿಲೆಂಡ್ ತಂಡಕ್ಕೆ 6 ಕೋಟಿ ರೂಪಾಯಿ ನೀಡಲಾಗಿದೆ. ಸೆಮಿಫೈನಲ್‌ನಲ್ಲಿ ಸೋತ ಇಂಗ್ಲೆಂಡ್ ಮತ್ತು ಪಾಕಿಸ್ತಾನ ತಂಡಗಳು 3 ಕೋಟಿ ರೂಪಾಯಿ ಬಹುಮಾನ ಪಡೆದಿವೆ. ಐಪಿಎಲ್‌ನ ಬಹುಮಾನಕ್ಕೆ ಹೋಲಿಕೆ ಮಾಡಿದ್ರೆ ವಿಶ್ವಕಪ್ ನಲ್ಲಿ ಸಿಗುವ ಹಣ ಕಡಿಮೆ.
ಈ ವರ್ಷ ಯುಎಇಯಲ್ಲಿ ನಡೆದ ಐಪಿಎಲ್ ಟೂರ್ನಿಯ ವಿಜೇತ ತಂಡ ಚೆನ್ನೈ ಸೂಪರ್ ಕಿಂಗ್ಸ್ ಗೆ 20 ಕೋಟಿ ರೂಪಾಯಿ ಬಹುಮಾನ ನೀಡಲಾಗಿದೆ. ಫೈನಲ್ ನಲ್ಲಿ ಸೋಲುಂಡ ಕೋಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ 12.5 ಕೋಟಿ ರೂಪಾಯಿ ನೀಡಲಾಗಿದೆ. ಆದ್ರೆ ವಿಶ್ವಕಪ್ ವಿಜೇತ ತಂಡಕ್ಕೆ ಸಿಕ್ಕಿದ್ದು 12 ಕೋಟಿ ಮಾತ್ರ. ಇನ್ನು ವಿಶ್ವಕಪ್ ನ ಸೂಪರ್ 12 ಹಂತದಿಂದ ಹೊರಬಂದ ಪ್ರತಿ ತಂಡಕ್ಕೆ 70 ಸಾವಿರ ಡಾಲರ್ ನೀಡಲಾಗಿದೆ. ಒಂದನೇ ಸುತ್ತಿನಲ್ಲೇ ಹೊರಬಿದ್ದ ನಾಲ್ಕು ತಂಡಗಳಿಗೆ ತಲಾ 40 ಸಾವಿರ ಡಾಲರ್ ನೀಡಲಾಗಿದೆ.