ಡಮಾಸ್ಕಸ್: ಬಂಡುಕೋರರು ಡಮಾಸ್ಕಸ್ ವಶಪಡಿಸಿಕೊಂಡ ನಂತರ ಪದಚ್ಯುತ ಸಿರಿಯಾ ಅಧ್ಯಕ್ಷ ಬಶರ್ ಅಲ್-ಅಸ್ಸಾದ್ ಮತ್ತು ಅವರ ಕುಟುಂಬ ರಷ್ಯಾಕ್ಕೆ ಆಗಮಿಸಿದ್ದಾರೆ. ಅವರಿಗೆ ರಷ್ಯಾದ ಅಧಿಕಾರಿಗಳು ಆಶ್ರಯ ನೀಡಿದ್ದಾರೆ ಎಂದು ಕ್ರೆಮ್ಲಿನ್ ಮೂಲವನ್ನು ಉಲ್ಲೇಖಿಸಿ ರಷ್ಯಾದ ಸುದ್ದಿ ಸಂಸ್ಥೆಗಳು ವರದಿ ಮಾಡಿವೆ.
“ಸಿರಿಯಾದ ಅಧ್ಯಕ್ಷ ಅಸ್ಸಾದ್ ಮಾಸ್ಕೋಗೆ ಆಗಮಿಸಿದ್ದಾರೆ. ಮಾನವೀಯ ಆಧಾರದ ಮೇಲೆ ರಷ್ಯಾ ಅವರಿಗೆ(ಅವರಿಗೆ ಮತ್ತು ಅವರ ಕುಟುಂಬಕ್ಕೆ) ಆಶ್ರಯ ನೀಡಿದೆ” ಎಂದು ಹೆಸರಿಸದ ಮೂಲವನ್ನು ಇಂಟರ್‌ಫ್ಯಾಕ್ಸ್ ಸುದ್ದಿ ಸಂಸ್ಥೆ ಉಲ್ಲೇಖಿಸಿದೆ.
ಸಿರಿಯಾ ಬಂಡುಕೋರ ಹೋರಾಟಗಾರರು ಡಮಾಸ್ಕಸ್ ಗೆ ನುಗ್ಗಿ ಅಸ್ಸಾದ್ ಅವರನ್ನು 0ಪದಚ್ಯುತಗೊಳಿಸಿದರು. 13 ವರ್ಷಗಳ ಅಂತರ್ಯುದ್ಧದ ಹಾದಿಯಲ್ಲಿ ಬಂಡುಕೋರರು ಸಂಪೂರ್ಣ ಪಾರಮ್ಯ ಸಾಧಿಸಿದ್ದಾರೆ. ಅಸಾದ್ ಅವರ ಕುಟುಂಬದ ಸುಮಾರು ಆರು ದಶಕಗಳ ಆಡಳಿತವನ್ನು ಕೊನೆಗೊಳಿಸಿದರು. ಇದು ಅಸ್ಸಾದ್‌ನ 24 ವರ್ಷಗಳ ಆಡಳಿತ ಮತ್ತು ಸಿರಿಯಾದಲ್ಲಿ ಅವರ ಕುಟುಂಬದ 50 ವರ್ಷಗಳ ಆಡಳಿತವನ್ನು ಕೊನೆಗೊಳಿಸಿದೆ.