ಹೊಸ ವರ್ಷದ ಸಂದರ್ಭದಲ್ಲೇ ಸ್ವಿಜರ್ಲೆಂದ್ ಸರ್ಕಾರ ಹೊಸ ಕಾನೂನು ಜಾರಿಗೆ ತಂದಿದೆ. ಸಾರ್ವಜನಿಕವಾಗಿ ಬುರ್ಖಾ ಧರಿಸುವುದನ್ನು ನಿಷೇಧಿಸಿ ಆದೇಶ ಹೊರಡಿಸಲಾಗಿದೆ.
ಸಾರ್ವಜನಿಕವಾಗಿ ಬುರ್ಖಾ ಧರಿಸಿ, ಮುಖ ಮುಚ್ಚಿಕೊಂಡು ಓಡಾಡುವಂತಿಲ್ಲ. ಕಾನೂನು ಉಲ್ಲಂಘಿಸಿದರೆ 1000 ಸ್ವಿಸ್ ಫ್ರಾಂಕ್ ಗಳ ದಂಡ ವಿಧಿಸಲಾಗುವುದು ಎಂದು ಸ್ವಿಜರ್ಲೆಂಡ್ ಸರ್ಕಾರ ಆದೇಶ ಹೊರಡಿಸಿದೆ.
2021ರಲ್ಲಿಯೇ ಈ ಬಗ್ಗೆ ಜನಾಭಿಪ್ರಾಯ ಸಂಗ್ರಹಿಸಲಾಗಿತ್ತು. ಮುಖಕ್ಕೆ ಮುಸುಕು, ಬುರ್ಖಾ ಧರಿಸುವುದನ್ನು ನಿಷೇಧಿಸುವ ಬಗ್ಗೆ ವೋಟಿಂಗ್ ನಡೆದಿತ್ತು. ಬುರ್ಖಾ ನಿಷೇಧದ ಪರವಾಗಿ ಶೇ.51.21ರಷ್ಟು ನಾಗರಿಕರು ಮತ ಚಲಾಯಿಸಿದ್ದರು. ಬುರ್ಖಾ ನಿಷೇಧದ ವಿರುದ್ಧ ಶೇ.48.8ರಷ್ಟು ಜನರು ಮತ ಚಲಾಯಿಸಿದ್ದರು. ಇದೀಗ ಹೊಸ ವರ್ಷದಿಂದ ಸಾರ್ವಜನಿಕ ಸ್ಥಳಗಳಲ್ಲಿ ಬುರ್ಖಾ, ಮುಸುಕು ಧಾರಣೆ ನಿಷೇಧಿಸಿ ಆದೇಶ ಹೊರಡಿಸಲಾಗಿದೆ.
ಸಾರ್ವಜನಿಕ ಸ್ಥಳಗಳಲ್ಲಿ ಮುಖ, ಮೂಗು, ಬಾಯಿ, ಕಣ್ಣು ಮುಚ್ಚುವುದನ್ನು ನಿಷೇಧಿಸಲಾಗಿದೆ. ಸಾರ್ವಜನಿಕರು ಓದಾಡುವ ಖಾಸಗಿ ಸ್ಥಳಗಳಿಗೂ ಈ ನಿಯಮ ಅನ್ವಯವಾಗಲಿದೆ. ರಾಜತಾಂತ್ರಿಕ, ವಿಮಾನ ನಿಲ್ದಾಣ ಪ್ರದೇಶಗಳಿಗೆ, ಪೂಜಾ ಸ್ಥಳ, ಧಾರ್ಮಿಕ ಸ್ಥಳಗಳಲ್ಲಿ ಬುರ್ಖಾ ನಿಷೇಧ, ಮುಸುಕು ಧಾರಣೆ ನಿಷೇಧ ಅನ್ವಯವಾಗುವುದಿಲ್ಲ.
ಇನು ಆರೋಗ್ಯ ಕಾರಣಗಳಿಗೆ ಮುಖ ಮುಚ್ಚಿಕೊಳ್ಳಲು ಅಥವಾ ಮಾಸ್ಕ್ ಧರಿಸಲು ವಿನಾಯಿತಿ ನೀಡಲಾಗಿದೆ. ಪೊಲೀಸರು, ಸೈನಿಕರಿಗೆ ಗ್ಯಾಸ್ ಮಾಸ್ಕ್ ಧರಿಸಲು ವಿನಾಯಿತಿ ನೀಡಲಾಗಿದೆ.