ಚಿತ್ರದುರ್ಗ: ಕೆರೆಯಲ್ಲಿ ಈಜಲು ಹೋಗಿದ್ದ ಮೂವರು ಯುವಕರು ನೀರು ಪಾಲಾದ ಘಟನೆ ನಂದನಹೊಸೂರು ಗ್ರಾಮದಲ್ಲಿ ನಡೆದಿದೆ.
ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲೂಕಿನ ನಂದನಹೊಸೂರು ಗ್ರಾಮದ ಸಮೀಪದ ಕೆರೆಯಲ್ಲಿ ಘಟನೆ ನಡೆದಿದೆ. ನಂದನಹೊಸೂರು ಗ್ರಾಮದ ನಿವಾಸಿ ಗಿರೀಶ್(18), ಹೊರಕೆರೆದೇವರಪುರ ನಿವಾಸಿ ಸಂಜಯ್(18), ಕಣಿವೆಜೋಗಿಹಳ್ಳಿ ನಿವಾಸಿ ಮನು(19) ಮೃತಪಟ್ಟವರು ಎಂದು ಹೇಳಲಾಗಿದೆ ನಿನ್ನೆ ಸಂಜೆ ಕೆರೆಯಲ್ಲಿ ಈಜಲು ಹೋಗಿದ್ದಾಗ ದುರಂತ ಸಂಭವಿಸಿದೆ. ಹೊಳಲ್ಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.