ಆಸ್ಟ್ರೇಲಿಯಾದ ಮೆಲ್ಬೋರ್ನ್ನಲ್ಲಿ ನಡೆದ ಟಿ20 ವಿಶ್ವಕಪ್ನ ಭಾರತದ ಮೊದಲ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಐತಿಹಾಸಿಕ ಆಟ ಜನರ ಮನ ಗೆದ್ದಿದೆ.
53 ಎಸೆತಗಳಲ್ಲಿ 82 ರನ್ ಗಳಿಸುವ ಮೂಲಕ ಭಾರತ ತಂಡವು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಭಾನುವಾರದಂದು ನಾಲ್ಕು ವಿಕೆಟ್ಗಳ ಮಹಾನ್ ಗೆಲುವು ಸಾಧಿಸಿತು.
“ಕಿಂಗ್ ಕೊಹ್ಲಿ” ಆಟವನ್ನು ಸೆಲಬ್ರೇಟ್ ಮಾಡಲು ಆಹಾರ ವಿತರಣೆ ಅಪ್ಲಿಕೇಶನ್ ಸ್ವಿಗ್ಗಿಯು “KINGKOHLI82” ಎಂಬ ಕೂಪನ್ ಕೋಡ್ ಅನ್ನು ಬಿಡುಗಡೆ ಮಾಡಿತ್ತು.
ರಿಯಾಯಿತಿ ಕೂಪನ್ ಅನ್ನು ಪಡೆಯಲು ಯೋಜಿಸುವ ಬಳಕೆದಾರರು, ಈ ಕೋಡ್ ಅನ್ನು ಬಳಸುವ ಮೂಲಕ ತಮ್ಮ ಆರ್ಡರ್ನಲ್ಲಿ ಫ್ಲಾಟ್ 82 ರೂ. ರಿಯಾಯಿತಿಯನ್ನು ಪಡೆಯುತ್ತಾರೆ.
ಸೋಹಿನಿ ಎಂಬುವರು ಟ್ವಿಟರ್ನಲ್ಲಿ ಆಫರ್ನ ಸ್ಕ್ರೀನ್ಶಾಟ್ ಅನ್ನು ಹಂಚಿಕೊಂಡಿದ್ದಾರೆ.ಇದು ಅದ್ಭುತ ಕ್ಷಣ ಮಾರ್ಕೆಟಿಂಗ್ ಎಂದೂ ಅವರು ಸ್ವಿಗ್ಗಿಯ ಕಾಲೆಳೆದಿದ್ದಾರೆ. ಪೋಸ್ಟ್ 3,000 ಕ್ಕೂ ಹೆಚ್ಚು ಲೈಕ್ ಮತ್ತು 209 ರೀಟ್ವೀಟ್ಗಳನ್ನು ಸಂಗ್ರಹಿಸಿದೆ.
ಕೆಲವು ಬಳಕೆದಾರರು ಕೂಪನ್ ಅವರಿಗೆ ಕೆಲಸ ಮಾಡಲಿಲ್ಲ ಎಂದಿದ್ದಾರೆ. ಸ್ವಿಗ್ಗಿ ಪ್ರತಿಕ್ರಿಯೆ ನೀಡಿ ಕೂಪನ್ ಮೊದಲ 40 ಸಾವಿರ ಗ್ರಾಹಕರಿಗೆ ಲಭ್ಯವಿತ್ತು, ಮೊದಲು ಬಂದವರಿಗೆ ಮೊದಲ ಸೇವೆ ಆಧಾರದ ಮೇಲೆ ನೀಡಲಾಗಿತ್ತು. ನಿರಾಸೆ ಬೇಡ, ಶೀಘ್ರದಲ್ಲೇ ಹೆಚ್ಚು ಲಾಭದಾಯಕ ಕೊಡುಗೆಗಳೊಂದಿಗೆ ಬರಲಿದೆ ಎಂದು ತಿಳಿಸಿತ್ತು.