ನವದೆಹಲಿ: ಆಹಾರ ವಿತರಣಾ ಕಂಪನಿಯಾದ ಸ್ವಿಗ್ಗಿ, ತನ್ನ ಮಹಿಳಾ ವಿತರಣಾ ಪಾಲುದಾರರಿಗಾಗಿ ಎರಡು ದಿನಗಳ ವಿಶೇಷ ಪಾವತಿ ಸಹಿತ ಮಾಸಿಕ ರಜೆ ಪಾಲಿಸಿಯನ್ನು ಪರಿಚಯಿಸಿದೆ.
ಮಹಿಳಾ ನೌಕರರನ್ನು ಹೆಚ್ಚಾಗಿ ಸೇರುವುದಕ್ಕೆ ಪ್ರೋತ್ಸಾಹಿಸುವ ಉದ್ದೇಶದಿಂದ ಕಂಪನಿಯು ಈ ನಿರ್ಧಾರವನ್ನು ಮಾಡಿದೆ. ಮಹಾರಾಷ್ಟ್ರದ ಪುಣೆಯಲ್ಲಿ 2016 ರಲ್ಲಿ ಕಂಪನಿಯು ತನ್ನ ಮೊದಲ ಮಹಿಳಾ ವಿತರಣಾ ಪಾಲುದಾರನನ್ನು ನೇಮಿಸಿತು ಎಂದು ಬ್ಲಾಗ್ ಪೋಸ್ಟ್‌ನಲ್ಲಿ ಸ್ವಿಗ್ಗಿ ಹೇಳಿದೆ.
ಇದೀಗ ಅಗತ್ಯ ಬದಲಾವಣೆಗಳನ್ನು ತರಲು, ಮಹಿಳಾ ವಿತರಣಾ ಪಾಲುದಾರರು ಎದುರಿಸುತ್ತಿರುವ ಸವಾಲುಗಳನ್ನು ಅರಿತುಕೊಳ್ಳಬೇಕಾಗಿದೆ. ವಿಶೇಷವಾಗಿ ಮಹಿಳೆಯರ ಸುರಕ್ಷತೆಗೆ ಸಂಬಂಧಿಸಿದಂತೆ ಹಲವು ಸವಾಲುಗಳಿವೆ. ಮಹಿಳೆಯರನ್ನು ಪ್ರೋತ್ಸಾಹಿಸುವ ವಾತಾವರಣವನ್ನು ಸೃಷ್ಟಿಸುವುದು ನಮ್ಮ ಆದ್ಯತೆಯಾಗಿದೆ. ಮತ್ತು ಆ ದಿಕ್ಕಿನಲ್ಲಿ ನಮ್ಮ ಇತ್ತೀಚಿನ ಕೆಲವು ಪ್ರಯತ್ನಗಳು ಇಲ್ಲಿವೆ ಎಂದು ತನ್ನ ಪೋಸ್ಟ್ ನಲ್ಲಿ ತಿಳಿಸಲಾಗಿದೆ.
ಪ್ರಸ್ತುತ, ಸ್ವಿಗ್ಗಿ ದೇಶದಾದ್ಯಂತ 200,000 ಕ್ಕಿಂತ ಹೆಚ್ಚು ವಿತರಣಾ ಪಾಲುದಾರರನ್ನು ಹೊಂದಿದೆ, ಅದರಲ್ಲಿ 1,000 ಮಂದಿ ಮಹಿಳಾ ವಿತರಣಾ ಪಾಲುದಾರರಾಗಿದ್ದಾರೆ. ಈ 1000 ಮಹಿಳಾ ವಿತರಣಾ ಪಾಲುದಾರರು ಸ್ವಿಗ್ಗಿ ಇತ್ತೀಚೆಗೆ ಆರಂಭಿಸಿದ ಯೋಜನೆಯಿಂದ ಪ್ರಯೋಜನ ಪಡೆಯಬಹುದಾಗಿದೆ.
ಯಾವುದೇ ಮುಟ್ಟಿನ-ಸಂಬಂಧಿತ ಸವಾಲುಗಳ ಮೂಲಕ ಅವರನ್ನು ಬೆಂಬಲಿಸಲು, ನಾವು ನಮ್ಮ ಎಲ್ಲಾ ಸಾಮಾನ್ಯ ಸ್ತ್ರೀ ವಿತರಣಾ ಪಾಲುದಾರರಿಗಾಗಿ ಯಾವುದೇ ಪ್ರಶ್ನೆಯಿಲ್ಲದ, ಎರಡು ದಿನಗಳ ಪಾವತಿಯ ಮಾಸಿಕ ಅವಧಿಯ ಪಾಲಿಸಿಯನ್ನು ಪರಿಚಯಿಸಿದ್ದೇವೆ. ಈ ಉದ್ಯಮದ ಮೊದಲ ಉಪಕ್ರಮವು ನಮ್ಮ ಮಹಿಳಾ ಡಿಇಗಳಿಗೆ ತಮ್ಮ ಋತುಚಕ್ರದ ಸಮಯದಲ್ಲಿ ಸ್ವಯಂಪ್ರೇರಣೆಯಿಂದ ವಿರಾಮ ತೆಗೆದುಕೊಳ್ಳುವ ಅವಕಾಶವನ್ನು ನೀಡುತ್ತದೆ ಎಂದು ತನ್ನ ಪೋಸ್ಟ್ ನಲ್ಲಿ ಸ್ವಿಗ್ಗಿ ವಿವರಿಸಿದೆ.