ಆನ್‌ಲೈನ್ ಆಹಾರ ವಿತರಣಾ ಕಂಪನಿ ಸ್ವಿಗ್ಗಿ, ಮಹಿಳಾ ಸಿಬ್ಬಂದಿಗೆ ಖುಷಿ ಸುದ್ದಿ ನೀಡಿದೆ. ಮಹಿಳಾ ಆಹಾರ ವಿತರಣಾ ಸಿಬ್ಬಂದಿಗೆ ವಿಶೇಷ ಯೋಜನೆ ಜಾರಿಗೆ ತಂದಿದೆ. ಸ್ವಿಗ್ಗಿ ಮಹಿಳಾ ಉದ್ಯೋಗಿಗಳಿಗೆ ತಿಂಗಳಲ್ಲಿ ಎರಡು ದಿನಗಳ ಕಾಲ ಪಿರಿಯಡ್ ಲೀವ್ ನೀಡುವುದಾಗಿ ಘೋಷಿಸಿದೆ.
ಕಂಪನಿ ತನ್ನ ಮಹಿಳಾ ವಿತರಣಾ ಪಾಲುದಾರರಿಗಾಗಿ ನೋ-ಕ್ವೆಶ್ಚನ್, ಟು ಡೇ ಪೇಯ್ಡ್ ಪಿರಿಯಡ್ ಲೀವ್ ಆಯ್ಕೆಯನ್ನು ನೀಡಿದೆ. ಈ ಬಗ್ಗೆ ಸ್ವಿಗ್ಗಿ ಮಾಹಿತಿ ನೀಡಿದೆ. ಮುಟ್ಟಿನ ಸಮಯದಲ್ಲಿ ರಸ್ತೆಯಲ್ಲಿ ಓಡಾಡುವುದು, ಡಿಲೆವರಿ ಮಾಡುವುದು ಮಹಿಳೆಯರಿಗೆ ಕಷ್ಟವಾಗುತ್ತದೆ. ಇದೇ ಕಾರಣಕ್ಕೆ ಮಹಿಳೆಯರು ಈ ಕೆಲಸಕ್ಕೆ ಬರುವುದಿಲ್ಲ. ಮಹಿಳೆಯರ ಮುಟ್ಟಿನ ಸಮಸ್ಯೆಗೆ ಪರಿಹಾರ ನೀಡುವ ಕಾರಣಕ್ಕೆ, ಯಾವುದೇ ಪ್ರಶ್ನೆ ಕೇಳದೆ ತಿಂಗಳಲ್ಲಿ 2 ದಿನ ರಜೆ ನೀಡುವ ನಿರ್ಧಾರ ತೆಗೆದುಕೊಂಡಿದ್ದೇವೆಂದು ಸ್ವಿಗ್ಗಿ ಕಾರ್ಯಾಚರಣೆ ಉಪಾಧ್ಯಕ್ಷ ಮಿಹಿರ್ ಷಾ ಹೇಳಿದ್ದಾರೆ.
ಪೊಲೀಸ್ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ: 14 ಮಂದಿ ಅರೆಸ್ಟ್
2016 ರಲ್ಲಿ ಸ್ವಿಗ್ಗಿ, ಮೊದಲ ಮಹಿಳಾ ಉದ್ಯೋಗಿಯನ್ನು ಡೆಲಿವರಿ ಏಜೆಂಟ್ ಆಗಿ ನೇಮಿಸಿಕೊಂಡಿತ್ತು. ಇದಲ್ಲದೆ ಮಹಿಳಾ ಸಿಬ್ಬಂದಿ ಸುರಕ್ಷತೆಗೂ ಆಧ್ಯತೆ ನೀಡಲಾಗಿದೆ. ಸೇಫ್ ಝೋನ್ ಹಾಗೂ ಸಂಜೆ 6 ಗಂಟೆಯವರೆಗೆ ಕೆಲಸದ ಸಮಯ ಸೇರಿದಂತೆ ಅನೇಕ ನಿಯಮಗಳನ್ನು ಸ್ವಿಗ್ಗಿ ಜಾರಿಗೆ ತಂದಿದೆ.