ಸ್ವಿಗ್ಗಿ ಇನ್ಸ್ಟಾಮಾರ್ಟ್ ಹಾಗೂ ಗ್ರಾಹಕರ ನಡುವೆ ನಡೆದ ತಮಾಷೆಯ ಸಂಭಾಷಣೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಗ್ರಾಹಕರೊಬ್ಬರು ತಮಾಷೆಗೆ ಕೇಳಿದ ಪ್ರಶ್ನೆಗೆ ಸ್ವಿಗ್ಗಿ ಇನ್ಸ್ಟಾಮಾರ್ಟ್ ತಿಂಗಳ ರೇಷನ್ ಕಳಿಸಿ ಅಚ್ಚರಿ ಮೂಡಿಸಿದೆ.
ಸ್ವಿಗ್ಗಿ ಇನ್ಸ್ಟಾಮಾರ್ಟ್ ಗ್ರಾಹಕ ಗೋಪೇಶ್ ಖೇತಾನ್ ಅವರು, “ಧನಿಯಾ ಏಕೆ ಕಳುಹಿಸುತ್ತೀರಾ, ತಿಂಗಳ ರೇಷನ್ ಕಳಿಸಿ” ಎಂದು ತಮಾಷೆ ಮಾಡಿದ್ದರು. ಇದಕ್ಕೆ ಸ್ವಿಗ್ಗಿ ಇನ್ಸ್ಟಾಮಾರ್ಟ್, “ಏನೇನು ಬೇಕು ಹೇಳಿ, ಕಳಿಸುತ್ತೇವೆ” ಎಂದು ಉತ್ತರ ನೀಡಿತ್ತು.
ಇದನ್ನು ನಂಬದ ಗೋಪೇಶ್ ಖೇತಾನ್, ಆಶ್ಚರ್ಯಚಕಿತರಾದರು. ಆದರೆ, ಕೆಲವೇ ಹೊತ್ತಿನಲ್ಲಿ ಸ್ವಿಗ್ಗಿ ಇನ್ಸ್ಟಾಮಾರ್ಟ್ ತಿಂಗಳ ರೇಷನ್ ಕಳಿಸಿತ್ತು. ಇದರಿಂದ ಆಶ್ಚರ್ಯಚಕಿತರಾದ ಗೋಪೇಶ್ ಖೇತಾನ್, ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಬರೆದುಕೊಂಡಿದ್ದಾರೆ.
ಸ್ವಿಗ್ಗಿ ಇನ್ಸ್ಟಾಮಾರ್ಟ್ ಕಳಿಸಿದ ರೇಷನ್‌ನಲ್ಲಿ ನೂಡಲ್ಸ್, ಬ್ರೆಡ್, ನಾಚೋಸ್ ಹಾಗೂ ರೂಹ್ ಅಫ್ಜಾ ಬಾಟಲ್ ಕೂಡ ಇತ್ತು. ಈ ಘಟನೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Bhai @SwiggyInstamart kya free ka dhaniya bhejte rehte ho, dum hai toh mahine bhar ka ration bhejwa ke dikhao😏 pic.twitter.com/WpNo3rzHTE
— Gopesh Khetan🌪️🌚 (@GopeshKhetan) March 19, 2025
Mazak Mazak mein ek mahine ka ration nikalwa liya, tum mast insaan ho @SwiggyInstamart 😭❤️ https://t.co/XGj0SabT1V pic.twitter.com/HaTv8RX1sc
— Gopesh Khetan🌪️🌚 (@GopeshKhetan) March 19, 2025