alex Certify ತಿನ್ನಲು ಸಿಹಿ…. ಆರೋಗ್ಯಕ್ಕೂ ಸಿಹಿ ‘ಖರ್ಜೂರʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತಿನ್ನಲು ಸಿಹಿ…. ಆರೋಗ್ಯಕ್ಕೂ ಸಿಹಿ ‘ಖರ್ಜೂರʼ

ದಿನವೂ ಖರ್ಜೂರ ಸೇವಿಸುವುದರಿಂದ ಆರೋಗ್ಯಕ್ಕೆ ಅನೇಕ ಲಾಭಗಳಿವೆ. ತಿನ್ನಲು ಸಿಹಿಯಾಗಿರುವ ಈ ಹಣ್ಣು ಆರೋಗ್ಯದ ಸಿಹಿ ಹೆಚ್ಚಿಸುವಲ್ಲಿ ಎಷ್ಟು ಪರಿಣಾಮಕಾರಿ ಎಂದು ತಿಳಿಯಲು ಮುಂದೆ ಓದಿ.

* ಇದರಲ್ಲಿ ನಾರಿನಂಶ ಅಧಿಕವಿರುವುದರಿಂದ ಸುಲಭವಾಗಿ ಜೀರ್ಣವಾಗುತ್ತದೆ. ದೇಹಕ್ಕೆ ಬೇಗನೆ ಶಕ್ತಿಯನ್ನು ತುಂಬುತ್ತದೆ.

* ದಿನವೂ ಖರ್ಜೂರ ತಿಂದರೆ ಹೊಟ್ಟೆಯಲ್ಲಿ ಆರೋಗ್ಯಕರವಾದ ಬ್ಯಾಕ್ಟೀರಿಯವನ್ನು ಹೆಚ್ಚು ಉತ್ಪತ್ತಿ ಮಾಡುವುದರಿಂದ ಕರುಳಿನ ಕಾರ್ಯಕ್ಕೆ ಸಹಾಯ ಮಾಡುತ್ತದೆ.

* ಖರ್ಜೂರ ತಿನ್ನುವುದರಿಂದ ಕ್ಯಾನ್ಸರ್ ರಕ್ತ ಕಣಗಳು ಹರಡುವುದನ್ನು ತಡೆಗಟ್ಟಬಹುದು.

* ಖರ್ಜೂರವನ್ನು ರಾತ್ರಿಯಲ್ಲಿ ನೀರಿನಲ್ಲಿ ನೆನೆಹಾಕಿ ಬೆಳಗ್ಗೆ ಅದನ್ನು ಜ್ಯೂಸ್ ರೀತಿ ಮಾಡಿ ಕುಡಿಯುವುದು ಹೃದಯ ಸಮಸ್ಯೆ ಇರುವವರಿಗೆ ಒಳ್ಳೆಯದು.

* ಖರ್ಜೂರದಲ್ಲಿ ಕಬ್ಬಿಣದಂಶ ಇರುವುದರಿಂದ ರಕ್ತಹೀನತೆಯನ್ನು ತಡೆಗಟ್ಟಬಹುದು.

* ಅಸಿಡಿಟಿ ಮತ್ತು ಹೃದಯದ ಉರಿ ಕಡಿಮೆಯಾಗಲು ಖರ್ಜೂರ ಸಹಾಯ ಮಾಡುತ್ತದೆ.

* ಹೆರಿಗೆಯ ನಂತರ ಎದೆ ಹಾಲು ಉತ್ಪತ್ತಿ ಹೆಚ್ಚು ಮಾಡುತ್ತದೆ ಈ ಖರ್ಜೂರ.

* ಖರ್ಜೂರ ಹಾಕಿ ಕಾಯಿಸಿದ ಹಾಲು ಮಕ್ಕಳಿಗೆ ಅತ್ಯುತ್ತಮವಾದ ಪೋಷಕಾಂಶವಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...