ನೈಸರ್ಗಿಕವಾಗಿ ಹೊಳೆಯುವ ತುಟಿ ಇರಬೇಕು ಅಂತಾ ಯಾರಿಗೆ ತಾನೇ ಆಸೆ ಇರೋದಿಲ್ಲ ಹೇಳಿ..? ಈಗಂತೂ ಲಿಪ್ಸ್ಟಿಕ್ಗಳ ಬಳಕೆ ಮಾಡುವವರ ಸಂಖ್ಯೆ ಹೆಚ್ಚಾಗಿರೋದ್ರಿಂದ ಬಹುತೇಕ ಮಂದಿ ಶುಷ್ಕ ತುಟಿಯ ಸಮಸ್ಯೆ ಎದುರಿಸ್ತಾ ಇರ್ತಾರೆ. ಇದಕ್ಕಾಗಿ ಲಿಪ್ ಬಾಮ್ಗಳನ್ನ ಹಚ್ಚಿದ್ರೂ ಸಹ ಶಾಶ್ವತ ಪರಿಹಾರ ಸಿಗೋದಿಲ್ಲ. ಆದರೆ ಮನೆಯಲ್ಲೇ ಇರುವ ಕೆಲ ವಸ್ತುಗಳನ್ನ ಬಳಕೆ ಮಾಡುವ ಮೂಲಕ ನೀವು ನೈಸರ್ಗಿಕವಾಗಿಯೇ ಕಾಂತಿಯುತ ತುಟಿಯನ್ನ ಹೊಂದಬಹುದಾಗಿದೆ.
ಇದಕ್ಕಾಗಿ ನೀವು ಸಕ್ಕರೆಯನ್ನ ಬಳಕೆ ಮಾಡಬೇಕು. ಸಕ್ಕರೆಯನ್ನ ಕಾಫಿ ಪುಡಿಯೊಂದಿಗೆ ಮಿಶ್ರಣ ಮಾಡಿ. ಇದಕ್ಕೆ ಕೆಲ ಹನಿ ಆಲಿವ್ ಇಲ್ಲವೇ ಕೊಬ್ಬರಿ ಎಣ್ಣೆಯನ್ನ ಮಿಕ್ಸ್ ಮಾಡಿ. ಇದಕ್ಕೆ ನಿಂಬೆ ರಸವನ್ನ ಸೇರಿಸಿ ಚೆನ್ನಾಗಿ ಕಲಸಿ. ಇದನ್ನ 15 ನಿಮಿಷಗಳ ಕಾಲ ನಿಮ್ಮ ತುಟಿಗೆ ಸ್ಕ್ರಬ್ ರೀತಿಯಲ್ಲಿ ಬಳಕೆ ಮಾಡಿ. ವಾರಕ್ಕೆ 1 ರಿಂದ 2 ಬಾರಿ ಈ ರೀತಿ ಮಾಡೋದ್ರಿಂದ ಉತ್ತಮ ಫಲಿತಾಂಶ ಸಿಗಲಿದೆ.
ಇದರ ಬದಲು ಬ್ರೌನ್ ಶುಗರ್ ತೆಗೆದುಕೊಂಡ ಪ್ರಮಾಣದಲ್ಲಿ ಜೇನು ತುಪ್ಪ ಹಾಗೂ ತುಪ್ಪ ಮತ್ತು ಹಾಲಿನ ಕೆನೆಯನ್ನ ತೆಗೆದುಕೊಂಡು ಸರಿಯಾಗಿ ಪೇಸ್ಟ್ ಮಾಡಿಕೊಳ್ಳಿ. ಇದನ್ನ ನಿಮ್ಮ ತುಟಿಗಳ ಮೇಲೆ 10 ನಿಮಿಷಗಳ ಕಾಲ ಮಸಾಜ್ ಮಾಡಿ ತೊಳೆಯಿರಿ. ಉತ್ತಮ ಫಲಿತಾಂಶಕ್ಕಾಗಿ ವಾರದಲ್ಲಿ 1 ರಿಂದ 2ವಾರ ಈ ರೀತಿ ಮಾಡಿ.