ಸ್ಯಾಂಡ್ ವಿಚ್ ಅನ್ನು ಎಲ್ಲರೂ ತಿಂದೇ ಇರುತ್ತಾರೆ. ಆದರೆ ಬರೀ ತರಕಾರಿ ಸ್ಯಾಂಡ್ ವಿಚ್ ಬದಲಿಗೆ ಕಾರ್ನ್ ಹಾಕಿ ಮಾಡಿದರೆ ಅದು ಇನ್ನೂ ರುಚಿ.
ಹಾಗಿದ್ರೆ ಪಟಾಪಟ್ ಅಂತಾ ತಯಾರಿಸಬಹುದಾದ ಸ್ವೀಟ್ ಕಾರ್ನ್ ಸ್ಯಾಂಡ್ ವಿಚ್ ಹೇಗೆ ಮಾಡೋದು ಅನ್ನೋದನ್ನು ನೋಡೋಣ.
ಬೇಕಾಗುವ ಪದಾರ್ಥಗಳು :
¾ ಕಪ್ ಬೇಯಿಸಿದ ಸ್ವೀಟ್ ಕಾರ್ನ್
2 ಟೀಸ್ಪೂನ್ ಕತ್ತರಿಸಿದ ಕ್ಯಾಪ್ಸಿಕಮ್
2 ಟೀಸ್ಪೂನ್ ಕತ್ತರಿಸಿದ ಈರುಳ್ಳಿ
¼ ಕಪ್ ಚೀಸ್
½ ಟೀಸ್ಪೂನ್ ಪೆಪ್ಪರ್
¼ ಟೀಸ್ಪೂನ್ ಉಪ್ಪು
4 ಟೀಸ್ಪೂನ್ ಗ್ರೀನ್ ಚಟ್ನಿ
2 ಟೀಸ್ಪೂನ್ ಬೆಣ್ಣೆ
ಮಾಡುವ ವಿಧಾನ : ಒಂದು ಬೌಲ್ ಗೆ ಬೇಯಿಸಿದ ಸ್ವೀಟ್ ಕಾರ್ನ್, ಕ್ಯಾಪ್ಸಿಕಮ್, ಈರುಳ್ಳಿ, ತುರಿದ ಚೀಸ್, ಪೆಪ್ಪರ್ ಪೌಡರ್, ಉಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ನಂತರ ಬ್ರೆಡ್ ತೆಗೆದುಕೊಂಡು ಅದಕ್ಕೆ ಗ್ರೀನ ಚಟ್ನಿ ಸವರಿ, ಅದರ ಮೇಲೆ ಕಾರ್ನ್ ಮಿಕ್ಸ್ ಹಾಕಿ ಮತ್ತೊಂದು ಬ್ರೆಡ್ ಹಾಕಿ ಅದಕ್ಕೆ ಬೆಣ್ಣೆ ಸವರಿ ರೋಸ್ಟ್ ಮಾಡಿ.