ಶರೀರಕ್ಕೆ ಆಯಾಸವಾಗುವಂತಹ ಕೆಲಸ ಮಾಡಿದಾಗ ಬೆವರುವುದು ಸಾಮಾನ್ಯ ಸಂಗತಿ. ಇದರಿಂದ ದೇಹಕ್ಕೆ ಯಾವುದೇ ರೀತಿಯ ಅಪಾಯವಿಲ್ಲ. ಆದರೆ ಆಯಾಸವಿಲ್ಲದೇ ಬರುವ ಬೆವರನ್ನು ಮಾತ್ರ ಕಡೆಗಣಿಸಬೇಡಿ. ಹೀಗೆ ಸುಮ್ಮನೆ ಬರುವ ಬೆವರು ಅಪಾಯದ ಮುನ್ಸೂಚನೆ ಆಗಿರಬಹುದು.
ತುಂಬ ಸಮಯದಿಂದ ಕುಡಿತದ ಅಭ್ಯಾಸ ಇರುವವರಿಗೆ ಹಾಗೂ ಹೆಚ್ಚು ಹೆಚ್ಚು ಕುಡಿಯುವವರು ತುಂಬ ಬೆವರುತ್ತಾರೆ. ಕೆಲವು ಮಹಿಳೆಯರಿಗೆ ಗರ್ಭಾವಸ್ಥೆಯಲ್ಲಿ ಹಾರ್ಮೋನ್ ವ್ಯತ್ಯಾಸದಿಂದ ಬೆವರು ಬರುವುದು ಸಾಮಾನ್ಯ.
ವಯಸ್ಸಾದ ಕೆಲವು ಮಹಿಳೆಯರು ತುಂಬ ಬೆವರುತ್ತಾರೆ. ಋತು ಚಕ್ರ ನಿಂತಾಗ ಹೀಗೆ ಬೆವರುವುದು ಸಹಜ. ಹೆಚ್ಚಿನ ಬೆವರು ಕೆಲವೊಮ್ಮೆ ಥೈರಾಯ್ಡ್ ಸಮಸ್ಯೆಯ ಮುನ್ಸೂಚನೆಯಾಗಿರುತ್ತದೆ. ಹಾಗಿದ್ದಲ್ಲಿ ವೈದ್ಯರನ್ನು ಕಾಣುವುದು ಉತ್ತಮ. ಆದರೆ ಕೆಲವೊಮ್ಮೆ ಅತಿಯಾಗಿ ಬೆವರುವುದು ಕ್ಯಾನ್ಸರ್ ನ ಲಕ್ಷಣವಾಗಿರುತ್ತದೆ. ಹೀಗಾದಾಗ ರಾತ್ರಿಯ ಸಮಯದಲ್ಲಿ ತುಂಬ ಬೆವರುತ್ತಾರೆ. ವಾತಾವರಣ ತಂಪಾಗಿದ್ದರೂ ಕೂಡ ಬೆವರು ಬರುತ್ತದೆ. ಈ ಸಮಸ್ಯೆ ಬಹು ಗಂಭೀರವಾಗಿದ್ದು, ಸೂಕ್ತ ಚಿಕಿತ್ಸೆಯ ಅವಶ್ಯಕತೆ ಇರುತ್ತದೆ.