ಇನ್ನೇನು ಈ ವರ್ಷದ ಗಣೇಶೋತ್ಸವ ಸಮೀಪಿಸಿದೆ. ಎಲ್ಲೆಡೆ ಸಂಭ್ರಮ ಕಾಣಿಸಲಾರಂಭಿಸಿದೆ. ಗಣೇಶ ಚರ್ತುಥಿ ಆಗಸ್ಟ್ 31ರಂದು ಬರುತ್ತದೆ, ಸಾಮಾನ್ಯವಾಗಿ ಗಣೇಶ ವಿಸರ್ಜನೆಯು ಸೆಪ್ಟೆಂಬರ್ 9ರಂದು ಇದೆ.
ದೇಶಾದ್ಯಂದ ವಿವಿಧ ಅಲಂಕಾರಗಳಲ್ಲಿ ಸಾರ್ವಜನಿಕ ಗಣೇಶೋತ್ಸವ ಮಾಡಲಾಗುತ್ತದೆ. ಉತ್ತರಪ್ರದೇಶದಲ್ಲಿ ಗಣೇಶ ಚತುರ್ಥಿ ನಿಮಿತ್ತ 18 ಅಡಿ ಎತ್ತರದ ಚಿನ್ನದ ಅಲಂಕಾರದ ವಿಗ್ರಹವನ್ನು ಉತ್ತರ ಪ್ರದೇಶದ ಚಂದೌಸಿಯಲ್ಲಿ ಸಿದ್ಧಪಡಿಸಲಾಗುತ್ತಿದೆ.
ಇದು 18 ಅಡಿ ಎತ್ತರದ ವಿಗ್ರಹವಾಗಿರುತ್ತದೆ. ತಿರುಪತಿ ಬಾಲಾಜಿ ಮಾದರಿಯಲ್ಲಿ ಚಿನ್ನದ ಅಲಂಕಾರಿಕ ವಸ್ತುಗಳೊಂದಿಗೆ ಇದನ್ನು ಸಿದ್ಧಪಡಿಸಲಾಗುತ್ತಿದೆ ಎಂದು ಅದನ್ನು ತಯಾರಿಸುತ್ತಿರುವ ಅಜಯ್ ಆರ್ಯ ಮಾಧ್ಯಮಗಳಿಗೆ ಹೇಳಿಕೊಂಡಿದ್ದಾರೆ.