ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ಭಾರೀ ಟ್ರೋಲ್ ಆಗುವ ಬಾಲಿವುಡ್ ನಟಿ ಸ್ವರಾ ಭಾಸ್ಕರ್, ಆನ್ಲೈನ್ ಟ್ರೋಲಿಂಗ್ ವಿರುದ್ಧ ಗರಂ ಆಗಿದ್ದು, ಅದೊಂದು ಅಸಹ್ಯವೆಂದಿದ್ದಾರೆ.
ಟ್ವಿಟರ್‌ನಲ್ಲಿ ವಿಪರೀತ ಸಕ್ರಿಯವಾಗಿರುವ ಸ್ವರಾ, ಆಗಸ್ಟ್ 18ರಂದು ’ತಾಲಿಬಾನ್ ಭಯೋತ್ಪಾದನೆ’ಯನ್ನು ’ಹಿಂದುತ್ವ ಭಯೋತ್ಪಾದನೆ’ ಜೊತೆಗೆ ತುಲನೆ ಮಾಡಿದ ’ಸ್ವರಾರರನ್ನು ಬಂಧಿಸಿ’ ಅಭಿಯಾನವು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿತ್ತು.
ಕಿವಿಗೆ ಒಪ್ಪುವಂತಿರಲಿ ನೀವು ಖರೀದಿಸುವ ಕಿವಿಯೋಲೆ
ಈ ಬಗ್ಗೆ ಭಾರೀ ಅಸಮಾಧಾನ ಹೊರಹಾಕಿರುವ ಸ್ವರಾ, “ಸಾಮಾಜಿಕ ಜಾಲತಾಣವು ಸಾರ್ವಜನಿಕ ರಸ್ತೆಗಳು, ರೆಸ್ಟೋರೆಂಟ್‌ಗಳ ಹಾಗೆ. ಆದರೆ ಆಫ್‌ಲೈನ್‌ನಲ್ಲಿನ ಹಾಗೆ ಸಾಮಾಜಿಕ ಶಿಸ್ತು ಹಾಗೂ ಕನಿಷ್ಠ ಸೌಜನ್ಯವನ್ನು ಆನ್ಲೈನ್‌ನಲ್ಲಿ ಕಾಣಲು ಸಿಗುವುದಿಲ್ಲ. ವೀರೇ ದೀ ವೆಡ್ಡಿಂಗ್ ಚಿತ್ರದ ಹಸ್ತಮೈಥುನದ ದೃಶ್ಯವನ್ನು ವಿಪರೀತವಾಗಿ ಟ್ರೋಲ್ ಮಾಡಲಾಗಿದೆ. ಇದು ತೀರಾ ಅಸಹ್ಯ ಹಾಗೂ ಆನ್ಲೈನ್‌ನಲ್ಲಿ ನಡೆಯುವ ಇಂಥ ಗೊಡ್ಡು ಬೆದರಿಕೆಗಳಿಗೆ ನಾನು ಬಗ್ಗುವುದಿಲ್ಲ. ದ್ವೇಷ, ಪಕ್ಷಪಾತ ಹಾಗೂ ಬೆದರಿಕೆಗಳಿಗೆಲ್ಲಾ ನಾವು ವರ್ಚುವಲ್ ತಾಣವನ್ನು ಬಿಟ್ಟುಕೊಡಲು ಸಾಧ್ಯವಿಲ್ಲ” ಎಂದು ತಿಳಿಸಿದ್ದಾರೆ.
https://www.instagram.com/p/CSzbmlUoV4q/?utm_source=ig_web_copy_link