
ವಿಜಯಪುರ ಜಿಲ್ಲೆ ಬಬಲೇಶ್ವರ ತಾಲೂಕಿನ ಬಬಲಾದಿ ಸದಾಶಿವ ಮಠದ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ. ಮತ್ತೆ ಭೂಕಂಪದ ಭವಿಷ್ಯವನ್ನು ಬಬಲಾದಿ ಸಿದ್ದರಾಮಯ್ಯ ಮುತ್ಯಾ ಸ್ವಾಮೀಜಿ ನುಡಿದಿದ್ದಾರೆ. ಅಲ್ಲಲ್ಲಿ ಮೂಲೆಗಳಲ್ಲಿ ಭೂಮಿ ಕುಪ್ಪಳಿಸುತ್ತದೆ ಎಂದು ಹೇಳಿದ್ದಾರೆ.
2023ರ ಕಾಲಜ್ಞಾನ ಭವಿಷ್ಯ ನುಡಿದ ಬಬಲಾದಿ ಸಿದ್ದರಾಮಯ್ಯ ಮುತ್ಯಾ, ಮತ್ತೆ ಭೂಕಂಪದ ಭವಿಷ್ಯ ನುಡಿದಿದ್ದಾರೆ. ಅಲ್ಲಲ್ಲಿ ಮೂಲೆಗಳಲ್ಲಿ ಭೂಮಿ ಕುಪ್ಪಳಿಸುತ್ತೋ ಮಕ್ಕಳಿರಾ, ಸಜ್ಜನರು ಕೂಡ ದುರ್ಜನರಾಗುತ್ತಾರೆ. ಹಿಂಗಾರು, ಮುಂಗಾರು ಮಳೆ ಉತ್ತಮವಾಗಿ ಆಗಲಿವೆ. ನಮ್ಮ ನಮ್ಮ ನಡುವೆ ಜಗಳ ಹೊಡೆದಾಟ ನಡೆಯುತ್ತದೆ ಎಂದು ಹೇಳಿದ್ದಾರೆ.
ಮತ್ತೆ ಜಲಪ್ರಳಯದ ಭವಿಷ್ಯ ನುಡಿದ ಸಿದ್ದರಾಮಯ್ಯ ಮುತ್ಯಾ ಹೊಳೆಮಠ, ರಾಜ್ಯದಲ್ಲಿ ಕೊಲೆ, ಸುಲಿಗೆ, ದರೋಡೆ ಪ್ರಕರಣಗಳು ಹೆಚ್ಚಾಗುತ್ತವೆ. ವೈಶಾಖ ಹಾಗೂ ಜೇಷ್ಠ ಮಾಸದಲ್ಲಿ ಸುಖ, ಶಾಂತಿ ಸಿಗಲಿದ್ದು, ರಾಜಕಾರಣದಲ್ಲಿ ಹೊಸ ತಿರುವು ಉಂಟಾದೀತು. ಪ್ರಜೆಗಳಲ್ಲಿ ಏರು ಪೇರು ಆಗುತ್ತದೆ. ಆಳುವ ಪ್ರಭುಗಳಿಗೆ ಸುಭಿಕ್ಷ ಇದೆ. ಜಾತಿ, ಮತ, ಭೇದ- ಭಾವಕ್ಕೆ ಹೆಚ್ಚಿನ ಒಲವಿದೆ. ಮಕ್ಕಳಿಗೆ ತಂದೆ ತಾಯಿ ಮೇಲೆ ಹೆಚ್ಚಿನ ಪ್ರೀತಿ ಉಂಟಾಗಲಿದೆ. ಇದರಿಂದ ವೃದ್ದಾಶ್ರಮ ಕಡಿಮೆಯಾಗಲಿವೆ ಎಂದು ಹೇಳಿದ್ದಾರೆ.
ದನ ಕರುಗಳಿಗೆ ಬಂದ ರೋಗ ಕಡಿಮೆಯಾಗುವ ಕಾಲ ಸಮೀಪವಾಗಿದೆ. ಗಡಿ ಕಾಯುವ ಯೋಧರಿಗೆ ಜಯ ಉಂಟಾಗುವುದು. ಇನ್ನೊಂದು ಸೂತಕದ ಛಾಯೆ ಐತೆ. ಮುಂಗಾರು ಮಳೆ 9 ಅಣೆ, ಹಿಂಗಾರು ಮಳೆ 10 ಅಣೆ ಎಂದು ಭವಿಷ್ಯ ನುಡಿದಿದ್ದಾರೆ. 700 ವರ್ಷಗಳಿಂದ ಬಬಲಾದಿ ಮಠ ಕಾಲಜ್ಞಾನ ನುಡಿದಿದೆ. ಇಂದಿನವರೆಗೂ ಇಲ್ಲಿ ನುಡಿದ ಭವಿಷ್ಯಗಳು ಸತ್ಯವಾಗಿರುವ ಮಾಹಿತಿ ಇದೆ.