ಭಾರತದಲ್ಲಿ ಕೊರೊನಾ ವೈರಸ್ ಸೋಂಕಿನ ಸಂಖ್ಯೆ ಕಡಿಮೆಯಾಗ್ತಿದೆ. ಆದ್ರೆ ಬ್ಲಾಕ್ ಫಂಗಸ್ ಸೋಂಕಿತರ ಸಂಖ್ಯೆ ಹೆಚ್ಚಾಗ್ತಿದೆ. ಇದು ಜನರಲ್ಲಿ ಭಯ ಹುಟ್ಟಿಸಿದೆ. ಈ ಮಧ್ಯೆ ಯೋಗ ಗುರು ಬಾಬಾ ರಾಮ್ದೇವ್ ಶೀಘ್ರದಲ್ಲಿಯೇ ಕಪ್ಪು ಶಿಲೀಂಧ್ರಕ್ಕೆ ಔಷಧಿ ತರುವುದಾಗಿ ಹೇಳಿದ್ದಾರೆ.
ಒಂದು ವಾರದಲ್ಲಿ ಬ್ಲಾಕ್ ಫಂಗಸ್, ವೈಟ್ ಫಂಗಸ್ ಹಾಗೂ ಯಲ್ಲೋ ಫಂಗಸ್ ಗೆ ಔಷಧಿ ತರುವುದಾಗಿ ಯೋಗ ಗುರು ಬಾಬಾ ರಾಮ್ದೇವ್ ಹೇಳಿದ್ದಾರೆ. ಔಷಧಿ ಕಂಡು ಹಿಡಿಯುವ ಕೆಲಸ ಮುಗಿದಿದೆ. ಅಂತಿಮ ಪ್ರಕ್ರಿಯೆ ಬಾಕಿಯಿದೆ ಎಂದು ಅವರು ಹೇಳಿದ್ದಾರೆ. ಬಾಬಾ ರಾಮ್ದೇವ್ ಹಾಗೂ ಭಾರತೀಯ ವೈದ್ಯಕೀಯ ಸಂಘದ ಮಧ್ಯೆ ವಿವಾದವೆದ್ದಿದೆ.
ಆಧುನಿಕ ಅಲೋಪತಿಯನ್ನು ಸ್ಟುಪಿಡ್ ಮತ್ತು ದಿವಾಳಿ ವಿಜ್ಞಾನ ಎಂದು ಬಾಬಾ ರಾಮದೇವ್ ಕರೆದಿದ್ದರು. ಆದರೆ, ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷ್ ವರ್ಧನ್ ಅವರ ಮನವಿಯ ಮೇರೆಗೆ ಅವರು ತಮ್ಮ ಹೇಳಿಕೆಯನ್ನು ಹಿಂತೆಗೆದುಕೊಂಡಿದ್ದಾರೆ. ಇದಾದ ನಂತ್ರ ರಾಮ್ದೇವ್, ಐಎಂಎಗೆ 25 ಪ್ರಶ್ನೆಗಳನ್ನು ಕೇಳಿದ್ದರು. ಬಿಪಿ, ಟೈಪ್ 1, ಟೈಪ್ 2 ಡಯಾಬಿಟಿಸ್, ಥೈರಾಯ್ಡ್ ಬಗ್ಗೆ ಪ್ರಶ್ನೆ ಕೇಳಿದ್ದರು. ಹಾಗೂ ನಾನು ಅಲೋಪತಿ ವಿರೋಧಿಯಲ್ಲ. ವೈದ್ಯರ ವಿರೋಧಿಯೂ ಅಲ್ಲ ಎಂದಿದ್ದರು.