
ಭಾರತ ಹಾಗೂ ಇಂಗ್ಲೆಂಡ್ ನ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಭಾರತವು 2-1 ಅಂತರದಿಂದ ಗೆದ್ದು ಬೀಗಿತು. ಕ್ರಿಕೆಟಿಗರು ಮಾತ್ರವಲ್ಲದೆ ಭಾರತೀಯ ಅಭಿಮಾನಿಗಳು ಕೂಡ ಸಂಭ್ರಮಿಸಿದ್ದಾರೆ. ಆ ಮಧ್ಯೆ, ಟೀಂ ಇಂಡಿಯಾ ಕ್ಯಾಪ್ಟನ್ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.
ಹೌದು, ಪಂದ್ಯ ಮುಗಿದ ಬಳಿಕ ಮೈದಾನದಿಂದ ಡ್ರೆಸ್ಸಿಂಗ್ ರೂಮ್ ಗೆ ಹೋಗುತ್ತಿದ್ದ ವಿರಾಟ್ ಕೊಹ್ಲಿ, ಬಾಟಲಿ ಬಿದ್ದಿರುವುದನ್ನು ಗಮನಿಸಿದ್ದಾರೆ. ಕೂಡಲೇ ಅದನ್ನು ಕೈಗೆತ್ತಿಕೊಂಡಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಆದರೆ ಅದಕ್ಕಿಂತ ಮುನ್ನ, ಇಂಗ್ಲೆಂಡ್ ತಂಡದ ನಾಯಕ ಜೋ ರೂಟ್ ಬಾಟಲಿಯನ್ನು ನಿರ್ಲಕ್ಷಿಸಿ, ಅದರ ಪಕ್ಕದಲ್ಲೇ ನಡೆದು ಹೋಗುವುದನ್ನು ವಿಡಿಯೋದಲ್ಲಿ ನೋಡಬಹುದು.
ಸದ್ಯ, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ನಡೆಗೆ ಹಲವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಸ್ವಚ್ಛ ಇಂಗ್ಲೆಂಡ್ ಅಭಿಯಾನ ಅಂತೆಲ್ಲಾ ಪ್ರತಿಕ್ರಿಸಿದ್ದಾರೆ.