ತಿರುಪತಿ: ತಿರುಪತಿ ತಿಮ್ಮಪ್ಪನ ಭಕ್ತರಿಗೆ ಆಘಾತಕಾರಿ ಮಾಹಿತಿಯೊಂದು ಇಲ್ಲಿದೆ. ಭಕ್ತರಿಗೆ ಅಶ್ಲೀಲ ವೆಬ್ ಲಿಂಕ್ ಕಳಿಸಿದ ಸಂಗತಿ ಬೆಳಕಿಗೆ ಬಂದಿದೆ.
2008 ರಿಂದ ಶ್ರೀ ತಿರುಮಲ ಭಕ್ತಿ ಚಾನೆಲ್ ಆರಂಭಿಸಿದ್ದು, ಶ್ರೀ ವೆಂಕಟೇಶ್ವರ ಭಕ್ತಿ ಎಸ್,ವಿ.ಬಿ.ಸಿ. ವಾಹಿನಿಯಲ್ಲಿ ತಿಮ್ಮಪ್ಪನ ಸನ್ನಿಧಿಯಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ರಮಗಳನ್ನು ಪ್ರಸಾರ ಮಾಡಲಾಗುತ್ತದೆ. ಅಲ್ಲಿನ ಸಿಬ್ಬಂದಿ ಎಡವಟ್ಟು ಮಾಡಿಕೊಂಡಿರುವುದು ಗೊತ್ತಾಗಿದೆ.
ತನಿಖೆಯಲ್ಲಿ ಸ್ಫೋಟಕ ಸಂಗತಿ ಬಯಲಾಗಿದ್ದು, ಭಕ್ತರಿಗೆ ಅಶ್ಲೀಲ ವೆಬ್ ಲಿಂಕ್ ಕಳುಹಿಸಲಾಗಿದೆ. ಚಾನಲ್ ನಲ್ಲಿ ಪ್ರಸಾರವಾದ ಕಾರ್ಯಕ್ರಮದ ಲಿಂಕ್ ಕೊಡುವಂತೆ ಭಕ್ತರು ಕೇಳಿದ್ದು, ಅದರ ಬದಲಿಗೆ ಸಿಬ್ಬಂದಿಯೊಬ್ಬ ಪೋರ್ನ್ ವೆಬ್ ಸೈಟ್ ಲಿಂಕ್ ಕಳುಹಿಸಿದ್ದಾನೆ. ಭಕ್ತರು ನೀಡಿದ ದೂರಿನ ಮೇರೆಗೆ ಟಿಟಿಡಿ ತನಿಖೆ ನಡೆಸಿದೆ. ಸುಮಾರು 25 ಸಿಬ್ಬಂದಿ ಕಚೇರಿಯಲ್ಲಿ ಪೋರ್ನ್ ನೋಡುತ್ತ ಕಾಲ ಕಳೆಯುತ್ತಿರುವುದು ಗೊತ್ತಾಗಿದೆ. ಅಲ್ಲದೇ ಎಸ್.ವಿ.ಬಿ.ಸಿ. ವಾಹಿನಿಯಲ್ಲಿ ಹಣ ದುರುಪಯೋಗವಾಗಿರುವುದು ಗೊತ್ತಾಗಿದೆ ಎನ್ನಲಾಗಿದೆ.