ಸುಜುಕಿ ಕಂಪನಿಯ ಹೊಸ ಬೈಕ್ ಭಾರತದಲ್ಲಿ ಬಿಡುಗಡೆಯಾಗಿದೆ. V-Strom 800DE ಹೆಸರಿನ ಈ ಬೈಕ್‌ನ ಆರಂಭಿಕ ಬೆಲೆ ಬರೋಬ್ಬರಿ 10.30 ಲಕ್ಷ ರೂಪಾಯಿ. ಇದೊಂದು ಸ್ಪೋರ್ಟ್ಸ್ ಬೈಕ್. ಭಾರತದಲ್ಲಿ V-Strom 650 ಬದಲಾಗಿ ಈ ಬೈಕ್ ರಸ್ತೆಗಳಿದಿದ್ದು, ಈಗಾಗಲೇ ಪ್ರಪಂಚದಾದ್ಯಂತ ಮಾರಾಟವಾಗುತ್ತಿದೆ.
ಭಾರತದಲ್ಲಿ ಬಿಡುಗಡೆಯಾಗಿರುವ ಹೊಸ ಸುಜುಕಿ V-Strom 800DE ಬೈಕ್ 3 ಬಣ್ಣಗಳಲ್ಲಿ ಲಭ್ಯವಿದೆ – ಚಾಂಪಿಯನ್ ಯೆಲ್ಲೋ, ಗ್ಲಾಸ್ ಮ್ಯಾಟ್ ಮೆಕ್ಯಾನಿಕಲ್ ಗ್ರೇ ಮತ್ತು ಗ್ಲಾಸ್ ಸ್ಪಾರ್ಕಲ್ ಬ್ಲ್ಯಾಕ್.
ಸುಜುಕಿ V-Strom 800DE ಮಧ್ಯಮ ತೂಕದ ಮೋಟಾರ್‌ಸೈಕಲ್. ಸುಲಭವಾಗಿ ಇದರಲ್ಲಿ ಆಫ್-ರೋಡ್ ಹೋಗಬಹುದು. ಇದು ಸುಜುಕಿ GSX-8R ಮತ್ತು GSX-8S ನಂಥದ್ದೇ ಎಂಜಿನ್ ಅನ್ನು ಹೊಂದಿದೆ.
ಸುಜುಕಿ V-Strom 800DE ಅತ್ಯಂತ ಶಕ್ತಿಶಾಲಿ ಸ್ಪೋರ್ಟ್ಸ್ ಮೋಟಾರ್ ಸೈಕಲ್. ಇದಕ್ಕೆ ಶೋವಾ ಸಸ್ಪೆನ್ಶನ್ ಅನ್ನು ಎರಡೂ ಬದಿಗಳಲ್ಲಿ (ಮುಂಭಾಗ ಮತ್ತು ಹಿಂಭಾಗ) ಒದಗಿಸಲಾಗಿದೆ. ಗ್ರೌಂಡ್ ಕ್ಲಿಯರೆನ್ಸ್ ಸಹ 220mmನಷ್ಟಿದೆ. ಅಗತ್ಯಕ್ಕೆ ಅನುಗುಣವಾಗಿ ಸಸ್ಪೆನ್ಷನ್ ಅನ್ನು ಮುಂಭಾಗ ಮತ್ತು ಹಿಂಭಾಗದ ಡಿಸ್ಕ್ ಬ್ರೇಕ್‌ಗಳನ್ನು ಒದಗಿಸಲಾಗಿದೆ. ಇದರೊಂದಿಗೆ ಡ್ಯುಯಲ್-ಚಾನೆಲ್ ಎಬಿಎಸ್ ಸಹ ಲಭ್ಯವಿದೆ.
ಇದರ ಆಫ್-ರೋಡ್ ಸಾಮರ್ಥ್ಯವನ್ನು ಬಲಪಡಿಸಲು ಮುಂಭಾಗದಲ್ಲಿ 21-ಇಂಚು ಹಾಗೂ ಹಿಂಭಾಗದಲ್ಲಿ 17-ಇಂಚಿನ ಹಿಂಭಾಗದ ಸ್ಪೋಕ್ ಚಕ್ರಗಳನ್ನು ಅಳವಡಿಸಲಾಗಿದೆ. V-Strom 800DE ರೈಡ್ ಮೋಡ್‌ಗಳು ಲಭ್ಯವಿವೆ. ಅಡ್ಜಸ್ಟೇಬಲ್ ವಿಂಡ್‌ಸ್ಕ್ರೀನ್ ಮತ್ತು ಕಡಿಮೆ RPM ಅಸಿಸ್ಟ್‌ನಂತಹ ವೈಶಿಷ್ಟ್ಯಗಳನ್ನು ಇದು ಹೊಂದಿದೆ.
ಇದರಲ್ಲಿ 5-ಇಂಚಿನ TFT ಸ್ಕ್ರೀನ್ ಲಭ್ಯವಿದೆ. ಪ್ರಮುಖ ಮಾಹಿತಿಯನ್ನು ಇದರಲ್ಲಿ ಪಡೆಯಬಹುದು. V-Strom 800DE, 776cc ಪ್ಯಾರಲಲ್-ಟ್ವಿನ್ ಎಂಜಿನ್ ಅನ್ನು ಹೊಂದಿದೆ. ಇದಕ್ಕೆ 6-ಸ್ಪೀಡ್ ಗೇರ್ ಬಾಕ್ಸ್ ಅನ್ನು ಸೇರಿಸಲಾಗಿದೆ. ಭಾರತೀಯ ಮಾರುಕಟ್ಟೆಯಲ್ಲಿ ಇದು BMW F850 GS ಮತ್ತು ಟ್ರಯಂಫ್ ಟೈಗರ್ 900 ಬೈಕ್‌ಗಳೊಂದಿಗೆ ಸ್ಪರ್ಧಿಸುತ್ತದೆ.