ನವದೆಹಲಿ: ಥಾರ್ ಎಸ್‌ಯುವಿಗೆ ಸಿಕ್ಕ ಬ್ಲಾಕ್‌ಬಸ್ಟರ್ ಯಶಸ್ಸು ಮಹಿಂದ್ರಾ & ಮಹಿಂದ್ರಾಗೆ ಹೆಚ್ಚಿನ ಬಲವನ್ನು ಒದಗಿಸಿತ್ತು. ಈ ಯಶಸ್ಸನ್ನು ಗಮನಿಸಿದ ಭಾರತದ ಅತಿದೊಡ್ಡ ಕಾರು ತಯಾರಕ ಮಾರುತಿ ಸುಜುಕಿ ಎಸ್‌ಯುವಿ ಸೆಕ್ಟರ್‌ನಲ್ಲಿ ಯಶಸ್ಸಿನ ಛಾಪು ಮೂಡಿಸಲು ಕ್ಷಿಪ್ರ ತಯಾರಿ ನಡೆಸಿದೆ.
ಬಹುನಿರೀಕ್ಷಿತ ಜಿಮ್ನಿ ಅದರಲ್ಲಿ ಪ್ರಮುಖ ಪಾತ್ರವನ್ನು ವಹಿಸಲಿದೆ. ಥಾರ್‌ಗಿಂತ ಭಿನ್ನವಾಗಿ ಮತ್ತು ಹೆಚ್ಚಿನ ಸೌಲಭ್ಯಗಳನ್ನು, ಫೀಚರ್‌ಗಳನ್ನು ಜಿಮ್ನಿಯಲ್ಲಿ ನೀಡಲು ಮಾರುತಿ ಮುಂದಾಗಿದೆ.
ಮಾರುತಿ ಸುಜುಕಿಯು ತನ್ನ ತೀವ್ರ ನಿರೀಕ್ಷಿತ ಕಾಂಪ್ಯಾಕ್ಟ್ ಆಫ್‌ರೋಡರ್ ಜಿಮ್ನಿಯನ್ನು ಮುಂದಿನ ವರ್ಷದ ಮಧ್ಯಭಾಗದಲ್ಲಿ ಬಿಡುಗಡೆ ಮಾಡಲು ಸಿದ್ಧತೆ ನಡೆಸಿದೆ.
ಕಾರವಾರ ನೌಕಾನೆಲೆಯಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಯೋಗ
ವೇಗವಾಗಿ ಬೆಳೆಯುತ್ತಿರುವ ಎಸ್‌ಯುವಿ ವಿಭಾಗದಲ್ಲಿ ತನ್ನ ಅಸ್ತಿತ್ವವನ್ನು ಬಲಪಡಿಸಲು ಮಾರುತಿ ಸುಜುಕಿ ಪ್ರಯತ್ನಿಸುತ್ತಿದೆ. ಆಟೋ ಎಕ್ಸ್‌ಪೋ 2020ರಲ್ಲಿ ಜಿಮ್ನಿಯನ್ನು ಅನಾವರಣಗೊಳಿಸಲಾಗಿತ್ತು. ಕಂಪನಿಯು ಅದಕ್ಕೆ ಕಡಿಮೆ ಪ್ರಚಾರ ನೀಡಿದ್ದರೂ, ಅದು ಗರಿಷ್ಠ ಗ್ರಾಹಕರ ಗಮನ ಸೆಳೆಯಿತು. ಮಾರುತಿ ಸುಜುಕಿಯು ಮೂರು ಡೋರ್‌ಗಳ ಜಿಮ್ನಿಯನ್ನು ರಫ್ತು ಮಾರುಕಟ್ಟೆಗಳಿಗಾಗಿ ಕಳೆದ ವರ್ಷ ತಯಾರಿಸಲು ಪ್ರಾರಂಭಿಸಿತು.
ಈ ವಿದ್ಯಮಾನ ಭಾರತದಲ್ಲಿ ಜಿಮ್ನಿ ಬಿಡುಗಡೆ ಬೇಗನೆ ಆಗಲಿದೆ ಎಂಬ ಭರವಸೆಯನ್ನು ಹೆಚ್ಚಿಸಿತು. ಆದರೆ ಅದು ಈಡೇರುವುದು ಕಷ್ಟ. 2024ರ ಆರ್ಥಿಕ ವರ್ಷದ ಮೊದಲ ತ್ರೈಮಾಸಿಕದಲ್ಲಿ ಭಾರತ ರಸ್ತೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜಿಮ್ನಿ ಕಾಣಿಸಿಕೊಳ್ಳಲಿದೆ ಎಂದು ಕಂಪನಿ ಮೂಲಗಳು ತಿಳಿಸಿವೆ.
ಸಾಮಾನ್ಯವಾಗಿ ಮಾರುತಿ ಕಾರುಗಳ ಪ್ರಾಯೋಗಿಕತೆ ಮತ್ತು ಇಂಧನ ದಕ್ಷತೆಯನ್ನು ಭಾರತೀಯರು ನೋಡುತ್ತಾರೆ. ಮಾರುತಿ ಜಿಮ್ನಿಯನ್ನು 5 ಡೋರ್ ಎಸ್‌ಯುವಿ ಮಾದರಿ ಬಿಡುಗಡೆ ಮಾಡುವುದಲ್ಲದೆ, 7 ಸೀಟ್ ಆಯ್ಕೆಯೊಂದಿಗೆ 3 ರೀತಿಯ ಆವೃತ್ತಿಯನ್ನು ಕೂಡ ಪರಿಚಯಿಸುವ ಸಾಧ್ಯತೆ ಇದೆ.
ಮಾರುತಿ ಜಿಮ್ನಿ 5 ಆಸನಗಳು ಮತ್ತು 7 ಆಸನಗಳ ರೂಪದಲ್ಲಿ ಬಿಡುಗಡೆಯಾಗಲಿದೆ. ಈ ತಿಂಗಳಿಂದಲೇ ಮುಂಗಡ ಬುಕಿಂಗ್ ಶುರು ಮಾಡಬೇಕು ಎಂದು ಕಂಪನಿ ನಿಗದಿ ಮಾಡಿತ್ತು. ಆದರೆ ಬಿಡಿಭಾಗಗಳ ಕೊರತೆಯ ಕಾರಣ ಇದು ವಿಳಂಬವಾಗಿದೆ.