ದೇಶದಲ್ಲಿ ವ್ಯಾಪಕವಾಗುತ್ತಿರುವ ಸ್ಕೂಟರ್‌ಗಳ ಬೇಡಿಕೆಯ ಮೇಲೆ ಕಣ್ಣಿಟ್ಟಿರುವ ದ್ವಿಚಕ್ರ ವಾಹನ ಉತ್ಪಾದಕರು ಈ ವಿಭಾಗದಲ್ಲಿ ತಮ್ಮ ಪೋರ್ಟ್‌ಫೋಲಿಯೋಗೆ ಇನ್ನಷ್ಟು ಬಲ ತುಂಬಲು ಹೊಸ ಮಾಡೆಲ್‌ಗಳನ್ನು ಮಾರುಕಟ್ಟೆಗೆ ಬಿಡುತ್ತಿದ್ದಾರೆ.
ಹೊಟ್ಟೆ ʼಸ್ಲಿಮ್ʼ ಆಗಬೇಕೆಂದರೆ ಹೀಗೆ ಮಾಡಿ
ಅವೆನಿಸ್ ಹೆಸರಿನಲ್ಲಿ ಹೊಸ ಸ್ಕೂಟರ್ ಒಂದನ್ನು ಸುಜ಼ುಕಿ ಬಿಡುಗಡೆ ಮಾಡಿದೆ. 86,700 ರೂ. (ಎಕ್ಸ್ ಶೋರೂಂ) ಬೆಲೆಯ ಈ ಸ್ಕೂಟರ್‌ಗಳು ಇದೇ ಸುಜ಼ುಕಿಯ ಅಕ್ಸೆಸ್ 125ಗಿಂತ ಕೊಂಚ ದುಬಾರಿಯಾಗಿವೆ. ಅಕ್ಸೆಸ್ 125 ಹಾಗೂ ಬರ್ಗ್‌ಮನ್ ಸ್ಟ್ರೇಟ್‌ಗಳ ನಡುವಿನ ಗ್ಯಾಪ್‌ನಲ್ಲಿ ಈ ಸ್ಕೂಟರ್ ಅನ್ನು ಸುಜ಼ುಕಿ ತಂದಿದೆ.
“ಸುಜ಼ುಕಿಯ ಅಕ್ಸೆಸ್ ಹಾಗೂ ಬರ್ಗ್‌ಮನ್ ಸ್ಟ್ರೀಟ್‌ಗಳ ಮೇಲೆ ಜನರ ತೋರುತ್ತಿರುವ ನಂಬಿಕೆ ಹಾಗೂ ವಿಶ್ವಾಸದಿಂದ ಸಂತಸಗೊಂಡಿದ್ದೇವೆ. ನಮ್ಮ ಉತ್ಪನ್ನಗಳ ಮೇಲೆ ಗ್ರಾಹಕರು ಇಟ್ಟಿರುವ ನಂಬಿಕೆ ಹೊಸ ಉತ್ಪನ್ನಗಳ ಅಭಿವೃದ್ಧಿಗೆ ಇನ್ನಷ್ಟು ಹುರುಪನ್ನು ನಮ್ಮಲ್ಲಿ ತುಂಬುತ್ತದೆ. ಇದರಿಂದಾಗಿ ಜೆನ್ ಜ಼ಡ್ ಗ್ರಾಹಕರ ಬೇಡಿಕೆಗಳಿಗೆ ಅನುಗುಣವಾಗಿ ನಾವು ಕಾಲಿಡಬಹುದಾಗಿದೆ. ಭಾರತ ಹಾಗೂ ಜಪಾನ್‌ನಲ್ಲಿರುವ ನಮ್ಮ ತಂಡಗಳು ಹೊಸ ತಲೆಮಾರಿನ ಮಂದಿಯ ಅಗತ್ಯವನ್ನು ಅರ್ಥ ಮಾಡಿಕೊಂಡು, ಈ ಗ್ರಾಹಕರನ್ನು ಖುಷಿ ಪಡಿಸಲು ಹೊಸ ಉತ್ಪನ್ನ ಅಭಿವೃದ್ಧಿಪಡಿಸಿವೆ,” ಎಂದು ಸುಜ಼ುಕಿ ಮೋಟರ್‌ಸೈಕಲ್ ಇಂಡಿಯಾದ ಎಂ.ಡಿ ಸಂತೋಷಿ ಉಚಿಡಾ ತಿಳಿಸಿದ್ದಾರೆ.
ಶ್ವಾನದ ಸಮಯಪ್ರಜ್ಞೆಯಿಂದ ಉಳಿಯಿತು150ಕ್ಕೂ ಅಧಿಕ ಮಂದಿಯ ಪ್ರಾಣ….!
ಟಿವಿಎಸ್‌ನ ಎನ್‌ಟಾರ್ಕ್ 125ಗೆ ಪ್ರತಿಯಾಗಿ ಅವೆನಿಸ್ ಅನ್ನು ಸುಜ಼ುಕಿ ಬಿಡುಗಡೆ ಮಾಡಿದೆ ಎನ್ನಲಾಗುತ್ತಿದೆ. ದೊಡ್ಡ ಎಲ್‌ಇಡಿ ಹೆಡ್‌ಲ್ಯಾಂಪ್, ಮುಂಭಾಗದ ವೈಸರ್, ಆಕರ್ಷಕ ಸೈಡ್ ಪ್ಯಾನೆಲ್‌ಗಳು, ಎಲ್‌ಇಡಿ ಟೇಲ್ ಲೈಟ್ ಸೇರಿದಂತೆ ಹೊಸ ಫೀಚರ್‌ಗಳನ್ನು ಈ ಸ್ಕೂಟರ್ ಹೊಂದಿದೆ.
ವಾಹನದ ವೇಗ, ಇಂಧನದ ಮಟ್ಟ, ಟ್ರಿಪ್ ಮೀಟರ್, ಓಡೋಮೀಟರ್, ಗಡಿಯಾರ ಸೇರಿದಂತೆ ಮಹತ್ವದ ಮಾಹಿತಿಗಳನ್ನು ನೀಡಲು ಎಲ್‌ಸಿಡಿ ಇನ್ಸ್‌ಟ್ರುಮೆಂಟ್ ಕ್ಲಸ್ಟರ್ ಅನ್ನು ಅವೆನಿಸ್ ಸ್ಕೂಟರ್ ಹೊಂದಿದೆ. ಬ್ಲೂಟೂತ್ ಮೂಲಕ ಸ್ಮಾರ್ಟ್‌ಫೋನ್ ಸಂಪರ್ಕ ಸಾಧಿಸಿ ನ್ಯಾವಿಗೇಷನ್, ಕರೆ ಅಲರ್ಟ್, ಎಸ್‌ಎಂಎಸ್, ವಾಟ್ಸಾಪ್ ಅಲರ್ಟ್, ಅತಿಯಾದ ವೇಗದ ವಾರ್ನಿಂಗ್, ಫೋನ್ ಬ್ಯಾಟರಿ ಮಟ್ಟ ಸೇರಿದಂತೆ ಅನೇಕ ವಿಷಯಗಳನ್ನು ಅರಿಯಬಹುದಾಗಿದೆ.
ಯುಎಸ್‌ಬಿ ಚಾರ್ಜಿಂಗ್ ಪೋರ್ಟ್, ಸಮಗ್ರ ಇಂಜಿನ್ ಸ್ಟಾರ್ಟ್ ಹಾಗೂ ಕಿಲ್ ಸ್ವಿಚ್‌ಗಳು ಈ ಸ್ಕೂಟರ್‌ನಲ್ಲಿರುವ ಇನ್ನಿತರ ಆಧುನಿಕ ಫೀಚರ್‌ಗಳು.