alex Certify ಸಣ್ಣ ಕಾರುಗಳನ್ನು ಮಾರಾಟದಲ್ಲಿ ಹಿಂದಿಕ್ಕಿದ SUV ಗಳು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಣ್ಣ ಕಾರುಗಳನ್ನು ಮಾರಾಟದಲ್ಲಿ ಹಿಂದಿಕ್ಕಿದ SUV ಗಳು

ಜಗತ್ತಿನ ಅತಿ ದೊಡ್ಡ ಕಾರು ಮಾರುಕಟ್ಟೆಗಳಲ್ಲಿ ಒಂದಾದ ಭಾರತದಲ್ಲಿ ಎಸ್‌ಯುವಿಗಳ ಮಾರಾಟವು ಹ್ಯಾಚ್‌ಬ್ಯಾಕ್/ಸಣ್ಣ ಕಾರುಗಳಿಗಿಂತ ಜೋರಾಗಿ ಸಾಗುತ್ತಿದೆ. ಜನವರಿ 2022ರಲ್ಲಿ ಈ ಟ್ರೆಂಡ್ ಮೊದಲ ಬಾರಿಗೆ ಕಂಡು ಬಂದಿದೆ.

ಜಾಟೋ ಡೈನಾಮಿಕ್ಸ್ ಬಿಡುಗಡೆ ಮಾಡಿದ ಇತ್ತೀಚಿನ ಅಂಕಿಅಂಶಗಳ ಪ್ರಕಾರ, ಜನವರಿ 2022ರಲ್ಲಿ ದೇಶದಲ್ಲಿ ಮಾರಾಟವಾದ ಎಲ್ಲಾ ಕಾರುಗಳ ಪೈಕಿ 42% ಪಾಲನ್ನು ಎಸ್‌ಯುವಿ ಹೊಂದಿದ್ದರೆ, ಹ್ಯಾಚ್‌ಬ್ಯಾಕ್/ಸಣ್ಣ ಕಾರುಗಳ ಪಾಲು 35% ಇದೆ. ಗ್ರಾಮೀಣ ಮಾರುಕಟ್ಟೆಗಳು ಒತ್ತಡಕ್ಕೆ ಸಿಲುಕಿ ನಗರ ಪ್ರದೇಶದಲ್ಲಿ ಪ್ರೀಮಿಯಂ ಕಾರುಗಳಿಗೆ ಬೇಡಿಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಎಸ್‌ಯುವಿಗಳು ದೇಶದಲ್ಲಿ ಅತ್ಯಂತ ಹೆಚ್ಚು ಮಾರಾಟ ಕಾಣಲಿರುವ ಕಾರುಗಳ ವರ್ಗವಾಗಿರಲಿವೆ ಎಂದು ವಿಶ್ಲೇಷಕರು ತಿಳಿಸಿದ್ದಾರೆ. ಸಾಂಪ್ರದಾಯಿಕವಾಗಿ ಹ್ಯಾಚ್‌/ಮಿನಿ ಮಾರುಕಟ್ಟೆಯಾಗಿರುವ ಭಾರತದಲ್ಲಿ ಈ ಬೆಳವಣಿಗೆ ದೊಡ್ಡದೊಂದು ಬದಲಾವಣೆಯಾಗಿದೆ.

“ಎಸ್‌ಯುವಿಯ ಈ ಟ್ರೆಂಡ್ ಜನವರಿ 2022ರಿಂದ ಆಚೆಗೂ ಮುಂದುವರೆಯಲಿರುವ ಸುದೀರ್ಘಾವಧಿಯ ಟ್ರೆಂಡ್ ಎಂದು ಅಂದಾಜಿಸಿದ್ದೇವೆ. ಆರ್ಥಿಕ ಕುಸಿತದಿಂದ ಬಹಳಷ್ಟು ಉತ್ಪಾದಕರನ್ನು ಕಾಪಾಡಿದ್ದೇ ಎಸ್‌ಯುವಿಗಳು. 2021ರಲ್ಲಿ ಲಾಂಚ್‌ ಆದ 35 ಪ್ರಯಾಣಿಕ ವಾಹನಗಳ ಪೈಕಿ 22 ಎಸ್‌ಯುವಿಗಳೇ ಆಗಿವೆ. ಈ ವರ್ಷ ಇನ್ನೂ ಏಳು ಎಸ್‌ಯುವಿಗಳು ದೇಶದ ಮಾರುಕಟ್ಟೆ ಪ್ರವೇಶಿಸಲಿವೆ,” ಎನ್ನುತ್ತಾರೆ ಜಾಟೋ ಡೈನಾಮಿಕ್ಸ್‌ನ ರವಿ ಭಾಟಿಯಾ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...