
ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯಕ್ರಮಕ್ಕೆ ಜನರನ್ನು ಕರೆದೊಯ್ಯುತ್ತಿದ್ದ ಎಸ್ ಯುವಿ ವಾಹನ ಭೀಕರ ಅಪಘಾತಕ್ಕೀಡಾಗಿ ಪಲ್ಟಿಯಾದ ಪರಿಣಾಮ ಇಬ್ಬರು ಸಾವನ್ನಪ್ಪಿರುವ ಘಟನೆ ಛತ್ತೀಸ್ ಗಢದ ಗೌರೇಲಾ-ಪೆಂದ್ರ-ಮಾರ್ವಾಹಿ ಜಿಲ್ಲೆಯಲ್ಲಿ ನಡೆದಿದೆ.
ಎಸ್ ಯುವಿ ವಾಹನ ಬಿಲಾಸ್ ಪುರಕ್ಕೆ ತೆರಳುತ್ತಿತ್ತು. ವಾಹನದಲ್ಲಿ 8 ಜನರಿದ್ದರು. ಸೋನ್ ನದಿ ಸೇತುವೆ ಮೇಲೆ ವಾಹನ ತೆರಳುತ್ತಿದ್ದಾಗ ಚಾಲಕನ ನಿಯಂತ್ರಣ ಕಳೆದುಕೊಂಡ ವಾಹನ ರಸ್ತೆಯಲ್ಲಿ ಹೋಗುತ್ತಿದ್ದ ಮಹಿಳೆಯೂಬ್ಬರಿಗೆ ಡಿಕ್ಕಿಹೊಡೆದು ಪಲ್ಟಿಯಾಗಿ ನದಿಗೆ ಬಿದ್ದಿದೆ.
ಅಪಘಾತದಲ್ಲಿ ಮಹಿಳಾ ಪಾದಚಾರಿ ಹಾಗೂ ಎಸ್ ಯುವಿ ವಾಹನ ಚಾಲಕ ಇಬ್ಬರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. 7 ಜನರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಗೌರೆಲ್ಲಾ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಮೃತರನ್ನು ರಮಿತಾ ಬಾಯಿ ಹಾಗೂ ಚಾಲಕ ಬಾಬು ಲಾಲ್ ಚೌಧರಿ ಎಂದು ಗುರುತಿಸಲಾಗಿದೆ.
ಪ್ರಧಾನಿ ನರೇಂದ್ರ ಮೋದಿ ಇಂದು ಬಿಲಾಸ್ ಪುರದ ಮೊಹಭಟ್ಟಾ ಗ್ರಾಮದಲ್ಲಿ 33,700ಕೋಟಿಗೂ ಅಧಿಕ ಮೌಲ್ಯದ ವಿವಿಧ ಅಭಿವೃದ್ಧಿ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಲಿದ್ದು, ಈ ಕಾರ್ಯಕ್ರಮಕ್ಕೆಂದು ವಾಹನದಲ್ಲಿ ಜನರನ್ನು ಕರೆದುಕೊಂಡು ಹೋಗಲಾಗುತ್ತಿತ್ತು. ವೇಳೆ ಅಪಘಾತ ಸಂಭವಿಸಿದೆ.