ಬೆಂಗಳೂರು: ಮಹಿಳಾ ಪ್ರಯಾಣಿಕರು ಇಲ್ಲದಿದ್ದರೂ ಶಕ್ತಿ ಯೋಜನೆಯ ಉಚಿತ ಟಿಕೆಟ್ ಗಳನ್ನು ಹರಿದು ಎಸೆಯುತ್ತಿದ್ದ ನಿರ್ವಾಹಕನನ್ನು ಸಸ್ಪೆಂಡ್ ಮಾಡಲಾಗಿದೆ.
ಮೆಜೆಸ್ಟಿಕ್ -ತಾವರೆಕೆರೆ ಮಾರ್ಗದಲ್ಲಿ ಸಂಚರಿಸುವ ಬಿಎಂಟಿಸಿ ಬಸ್ ನಲ್ಲಿ ನಿರ್ವಾಹಕ ಪ್ರಕಾಶ್ ಅರ್ಜುನ್ ಕೋಟ್ಯಾಳ ಮಹಿಳಾ ಪ್ರಯಾಣಿಕರು ಇಲ್ಲದಿದ್ದರೂ ಇನ್ಸೆಂಟಿವ್ ಆಸೆಗೆ ಟಿಕೆಟ್ ಹರಿದು ಎಸೆದಿದ್ದಾರೆ.
ಉಚಿತ ಟಿಕೆಟ್ ಹೆಚ್ಚು ನೀಡಿದಂತೆ ನಿರ್ವಾಹಕರಿಗೆ ಇನ್ಸೆಂಟಿವ್ ಸಿಗುತ್ತದೆ. ಹೀಗಾಗಿ ಪ್ರಕಾಶ್ ಉಚಿತ ಟಿಕೆಟ್ ಗಳನ್ನು ಹರಿದು ಎಸೆಯುತ್ತಿದ್ದರು ಎನ್ನಲಾಗಿದೆ. ಪ್ರಯಾಣಿಕರೊಬ್ಬರು ಇದನ್ನು ವಿಡಿಯೋ ಮಾಡಿಕೊಂಡು ಜಾಲತಾಣದಲ್ಲಿ ಹಾಕಿದ್ದು, ಬಿಎಂಟಿಸಿ ಹಿರಿಯ ಅಧಿಕಾರಿಗಳು ವಿಚಾರಣೆ ನಡೆಸಿ ಪ್ರಕಾಶ್ ಅವರನ್ನು ಅಮಾನತು ಮಾಡಿ ಆದೇಶಿಸಲಾಗಿದೆ. ಮಹಿಳಾ ಪ್ರಯಾಣಿಕರು ಇಲ್ಲದಿದ್ದರೂ ಉಚಿತ ಟಿಕೆಟ್ ಗಳನ್ನು ಹರಿದು ಲೆಕ್ಕ ತೋರಿಸಿದರೆ ಅಂತಹ ನಿರ್ವಾಹಕರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಲಾಗಿದೆ.