ಸ್ಟುಡಿಯೋದಲ್ಲಿ ಕೆಲಸ ಮಾಡುವ ವೇಳೆ ಭಾರೀ ಪೆಪ್ಪಿಯಾದ ಉಲ್ಲಾಸಭರಿತ ಹಾಡೊಂದಕ್ಕೆ ಬಾಲಿವುಡ್ ನಟಿ ಸುಶ್ಮಿತಾ ಸೇನ್ ಮತ್ತು ಆಕೆ ಮಕ್ಕಳಾದ ರೇನೀ ಮತ್ತು ಆಲಿಶಾ ಹೆಜ್ಜೆ ಹಾಕುತ್ತಾ ಸಖತ್ ವರ್ಕೌಟ್ ಮಾಡಿದ್ದಾರೆ.
ಹೃದಯದ ಆರೋಗ್ಯಕ್ಕೆ ಮಾಡುವ ವ್ಯಾಯಾಮಗಳಲ್ಲಿ ಒಂದಾಗಿ ನೃತ್ಯವನ್ನು ಆಯ್ದುಕೊಳ್ಳಲು ಸುಶ್ಮಿತಾ ಸೆನ್ ಮತ್ತು ಆಕೆಯ ಮಕ್ಕಳು ಮುಂದಾಗಿದ್ದಾರೆ.
ನೇವೀ ನೀಲಿ ಬಣ್ಣದ ಕ್ರಾಪ್ ಟಾಪ್ ಜೊತೆಗೆ ಹೈ-ವೇಸ್ಟ್ ಟ್ರೌಶರ್ನಲ್ಲಿರುವ ಸುಶ್ಮಿತಾ ಸೆನ್, “ವರ್ಕೌಟ್ ಮಾಡಬೇಕು ಎನಿಸುತ್ತಿಲ್ಲವೇ? ನೋ ಪ್ರಾಬ್ಲಂ, ಕುಣಿಯೋಣ!! ನಿಮ್ಮ ಹೃದಯವನ್ನು ಆಲಿಸಿ… ಬೀಟ್ ಫಾಲೋ ಮಾಡಿ ಮತ್ತು ನಿಮ್ಮ ಸ್ವಂತ ರಿದಂನಲ್ಲಿ ಚಲಿಸಿ!! (ಕಾರ್ಡಿಯೋ ಮುಗಿಯಿತು),” ಎಂದು ತಮ್ಮ ವಿಡಿಯೋ ಪೋಸ್ಟ್ಗೆ ಕ್ಯಾಪ್ಷನ್ ಕೊಟ್ಟಿದ್ದಾರೆ.
https://youtu.be/6Fcw6yT2qKo