alex Certify Suryayaan : ಇಂದು ಬೆಳಗ್ಗೆ 11.50 ಕ್ಕೆ `ಆದಿತ್ಯ ಎಲ್-1’ ಉಡಾವಣೆ : ಈ ಲಿಂಕ್ ಕ್ಲಿಕ್ ಮಾಡಿ ಲೈವ್ ವೀಕ್ಷಿಸಿ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Suryayaan : ಇಂದು ಬೆಳಗ್ಗೆ 11.50 ಕ್ಕೆ `ಆದಿತ್ಯ ಎಲ್-1’ ಉಡಾವಣೆ : ಈ ಲಿಂಕ್ ಕ್ಲಿಕ್ ಮಾಡಿ ಲೈವ್ ವೀಕ್ಷಿಸಿ..!

ಬೆಂಗಳೂರು : ಚಂದ್ರಯಾನ-3 ಯಶಸ್ಸಿನ ಬೆನ್ನಲ್ಲೇ ಇಸ್ರೋ ಇದೀಗ ಸೂರ್ಯಯಾನಕ್ಕೆ ಮುಂದಾಗಿದ್ದು, ಸೆಪ್ಟೆಂಬರ್ 2 ರ ಇಂದು ಬೆಳಗ್ಗೆ 11.50 ಕ್ಕೆ ಸೌರನೌಕೆ ಆದಿತ್ಯ-ಎಲ್1 ಉಡಾವಣೆಗೆ ಸಿದ್ಧತೆ ನಡೆಸಿದೆ.

ಇಸ್ರೋ ಈಗಾಗಲೇ ಆದಿತ್ಯ-ಎಲ್ 1 ಸಿದ್ಧಪಡಿಸಿದ್ದು, ಸೌರ ಕರೊನ ಎಂದು ಕರೆಯುವ ಸೂರ್ಯನ ಹೊರ ವಾತಾವರಣ ಹಾಗೂ ಸೀಟು ಎಂದು ಗುರುತಿಸುವ ಸೌರ ಬಿರುಗಾಳಿ ರಹಸ್ಯೆ ಅಧ್ಯಯನಕ್ಕೆ ಮುಂದಾಗಿದ್ದು, ಇಂದು ಆದಿತ್ಯ ಎಲ್-1 ನೌಕೆ ಉಡಾವಣೆ ನಡೆಸಲಿದೆ. ಸೂರ್ಯನನ್ನು ಅಧ್ಯಯನ ಮಾಡುವ ಆದಿತ್ಯ ಎಲ್ 1 ಉಪಗ್ರಹವನ್ನು ಸೆಪ್ಟೆಂಬರ್ 2ರ ನಾಳೆ ಬೆಳಗ್ಗೆ 11.50 ಕ್ಕೆ ಇಸ್ರೋದ ಪಿಎಸ್ಎಲ್ ವಿ ಸಿ 57 ಉಡಾವಣಾ ನೌಕೆಯು ಗಗನದತ್ತ ಹೊತ್ತು ಸಾಗಲಿದೆ.

ಈ ಬಗ್ಗೆ ಟ್ವೀಟರ್ ನಲ್ಲಿ ಮಾಹಿತಿ ನೀಡಿರುವ ಇಸ್ರೋ, ಸೆಪ್ಟೆಂಬರ್ 2, 2023 ರಂದು ಭಾರತೀಯ ಕಾಲಮಾನ 11:50 ಗಂಟೆಗೆ ಸೂರ್ಯಯಾನ ಆದಿತ್ಯ ಎಲ್-1 ನೌಕೆ ಉಡಾವಣೆಯಾಗಲಿದ್ದು, ಲೈವ್ ವೀಕ್ಷಿಸಬಹುದಾಗಿದೆ ಎಂದು ತಿಳಿಸಿದೆ.

ಉಡಾವಣೆಯನ್ನು ಲೈವ್ ನಲ್ಲಿ ವೀಕ್ಷಿಸಬಹುದು

ಇಸ್ರೋ ವೆಬ್ ಸೈಟ್ ನಲ್ಲಿ https://isro.gov.in

ಫೇಸ್ ಬುಕ್ https://facebook.com/ISRO

ಯೂಟ್ಯೂಬ್ https://youtube.com/watch?v=_IcgGYZTXQw

ಡಿಡಿ ನ್ಯಾಷನಲ್ ಟಿವಿ ಚಾನೆಲ್

ಭಾರತೀಯ ಕಾಲಮಾನ 11:20 ಗಂಟೆಯಿಂದ ನೇರ ಪ್ರಸಾರ ಇರಲಿದೆ.

ಆದಿತ್ಯ-ಎಲ್ 1 ಬಾಹ್ಯಾಕಾಶ ನೌಕೆಯು ಸೌರ ಕರೋನದ ದೂರಸ್ಥ ವೀಕ್ಷಣೆಗಳನ್ನು ಒದಗಿಸಲು ಮತ್ತು ಭೂಮಿಯಿಂದ ಸುಮಾರು 1 ಪಾಯಿಂಟ್ 5 ಮಿಲಿಯನ್ ಕಿಲೋಮೀಟರ್ ದೂರದಲ್ಲಿರುವ ಎಲ್ 1(ಸೂರ್ಯ-ಭೂಮಿಯ ಲಗ್ರಾಂಜಿಯನ್ ಪಾಯಿಂಟ್) ನಲ್ಲಿ ಸೌರ ಮಾರುತದ ಸಿತು ವೀಕ್ಷಣೆಗಳನ್ನು ಒದಗಿಸಲು ವಿನ್ಯಾಸಗೊಳಿಸಲಾಗಿದೆ. ಭಾರತೀಯ ಬಾಹ್ಯಾಕಾಶ ಸಂಸ್ಥೆ ಸೂರ್ಯನ ವೀಕ್ಷಣೆಗಾಗಿ ನಿರ್ಮಿಸಿರುವ ಮೊದಲ ಮೀಸಲಾದ ಬಾಹ್ಯಾಕಾಶ ಕಾರ್ಯಾಚರಣೆ ಇದಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...