ಈ ವರ್ಷದ ಎರಡನೇ ಸೂರ್ಯಗ್ರಹಣ ಅಕ್ಟೋಬರ್ 2 ರಂದು ಸಂಭವಿಸಲಿದೆ. ಆದಾಗ್ಯೂ, ಈ ಗ್ರಹಣ ಭಾರತದಲ್ಲಿ ಗೋಚರಿಸುವುದಿಲ್ಲ. ಹಾಗಾಗಿ ಯಾವುದೇ ಸೂತಕ ಅವಧಿ ಭಾರತೀಯರಿಗೆ ಇರೋದಿಲ್ಲ. ಭಾರತದ ಕಾಲಮಾನದ ಪ್ರಕಾರ ರಾತ್ರಿ 9 ಗಂಟೆ 13 ನಿಮಿಷಕ್ಕೆ ಗ್ರಹಣ ಶುರುವಾಗಲಿದ್ದು, ಬೆಳಗಿನ ಜಾವ 3 ಗಂಟೆ 17 ನಿಮಿಷಕ್ಕೆ ಗ್ರಹಣ ಕೊನೆಗೊಳ್ಳಲಿದೆ.
ವರ್ಷದ ಎರಡನೇ ಸೂರ್ಯಗ್ರಹಣವು ಭಾರತದಲ್ಲಿ ಗೋಚರಿಸದಿದ್ದರೂ, ಗ್ರಹಣ ಅನೇಕ ರಾಶಿಗಳ ಮೇಲೆ ಪ್ರಭಾವ ಬೀರಲಿದೆ. ಸೂರ್ಯಗ್ರಹಣ ಕನ್ಯಾರಾಶಿಯಲ್ಲಿ ಹಸ್ತಾ ನಕ್ಷತ್ರದಲ್ಲಿ ಸಂಭವಿಸಲಿದೆ. ಕೆಲ ರಾಶಿಯ ಜನರು ಈ ಸಮಯದಲ್ಲಿ ಬಹಳ ಎಚ್ಚರಿಕೆ ವಹಿಸಬೇಕಾಗುತ್ತದೆ.
ವೃಷಭ : ವರ್ಷದ ಎರಡನೇ ಗ್ರಹಣವು ವೃಷಭ ರಾಶಿಯವರಿಗೆ ಸವಾಲುಗಳನ್ನು ತರಬಹುದು. ಹೆಚ್ಚಿನ ಕೆಲಸ ಮಾಡಿದ್ರೂ ಯಶಸ್ಸು ಸುಲಭವಾಗಿ ಸಿಗುವುದಿಲ್ಲ. ಜೀವನದಲ್ಲಿ ಅನೇಕ ತೊಡಕುಗಳು ಕಾಡಲಿವೆ.
ಸಿಂಹ: ಸಿಂಹ ರಾಶಿಯವರಿಗೂ ಈ ಗ್ರಹಣದಿಂದ ಕೆಲ ಸಮಸ್ಯೆ ಎದುರಾಗಲಿದೆ. ನಷ್ಟದ ಅಪಾಯವಿದೆ. ಹಣಕಾಸಿನ ವಹಿವಾಟುಗಳಲ್ಲಿ ಅತ್ಯಂತ ಜಾಗರೂಕರಾಗಿರುವುದು ಒಳ್ಳೆಯದು.
ಕನ್ಯಾ ರಾಶಿ : ಸೂರ್ಯಗ್ರಹಣವು ಕನ್ಯಾರಾಶಿಯಲ್ಲಿ ಸಂಭವಿಸುವ ಕಾರಣ ಹೆಚ್ಚು ಜಾಗರೂಕರಾಗಿರಬೇಕು. ಕುಟುಂಬದಲ್ಲಿ ಸಮಸ್ಯೆ ಕಾಡುವ ಸಾಧ್ಯತೆ ಹೆಚ್ಚಿದೆ. ಕಣ್ಮುಚ್ಚಿ ಯಾರನ್ನೂ ನಂಬಲು ಹೋಗಬೇಡಿ.