ಬುಧವಾರ ಜನವರಿ 24 ರಂದು ಸೂರ್ಯನು ಶ್ರವಣ ನಕ್ಷತ್ರಕ್ಕೆ ಹೋಗಲಿದ್ದಾನೆ. 24 ರಂದು ರಾತ್ರಿ 10.42 ಕ್ಕೆ ಶ್ರವಣ ನಕ್ಷತ್ರವನ್ನು ಪ್ರವೇಶಿಸಲಿದ್ದು. ಫೆಬ್ರವರಿ 7 , 2024 ರವರೆಗೆ ಸೂರ್ಯ ಇದೇ ನಕ್ಷತ್ರದಲ್ಲಿ ಇರಲಿದ್ದಾನೆ. ಸೂರ್ಯನ ನಕ್ಷತ್ರ ಬದಲಾವಣೆ ಎಲ್ಲ 12 ರಾಶಿಗಳ ಮೇಲೆ ಆಗಲಿದೆ. ಕೆಲವರಿಗೆ ಶುಭ ಫಲ ಸಿಕ್ಕರೆ ಮತ್ತೆ ಕೆಲವರಿಗೆ ಅಶುಭ ಫಲ ಪ್ರಾಪ್ತಿಯಾಗಲಿದೆ.
ಮೇಷ ರಾಶಿ : ಸೂರ್ಯನ ಈ ಬದಲಾವಣೆ ಮೇಷ ರಾಶಿಯವರ ಮನಸ್ಸಿನಲ್ಲಿ ಪ್ರಕ್ಷುಬ್ಧತೆ ತರುತ್ತದೆ. ಕೆಲಸದಲ್ಲಿ ಸಮಸ್ಯೆ ಬರುವ ಸಾಧ್ಯತೆ ಇದೆ.
ವೃಷಭ ರಾಶಿ : ಹಠಾತ್ ಆರ್ಥಿಕ ಲಾಭ ನಿಮಗಾಗಲಿದೆ. ಸ್ವಂತ ಪ್ರಯತ್ನ ಬಹಳ ಮುಖ್ಯವಾಗುತ್ತದೆ. ಇತರರನ್ನು ಯಾವುದೇ ಕಾರಣಕ್ಕೂ ಅವಲಂಭಿಸಬೇಡಿ.
ಮಿಥುನ ರಾಶಿ : ಸೂರ್ಯ ನಿಮ್ಮ ಮೇಲೆ ಕೃಪೆ ತೋರಲಿದ್ದಾನೆ. ಮಾಡಿದ ಕೆಲಸ ಯಶಸ್ವಿಯಾಗಲಿದೆ. ಆರ್ಥಿಕ ಲಾಭವಾಗಲಿದೆ.
ಕರ್ಕ ರಾಶಿ : ಕಿರಿಕಿರಿಯ ಸ್ವಭಾವ ಮುಂದುವರೆಯಲಿದೆ. ಆರೋಗ್ಯದಲ್ಲಿ ಸುಧಾರಣೆ ಕಾಣುವಿರಿ. ಬಜೆಟ್ ಮೇಲೆ ಪರಿಣಾಮ ಬೀರಬಹುದು.
ಸಿಂಹ ರಾಶಿ : ಪ್ರಮುಖ ಕೆಲಸಗಳಲ್ಲಿ ನಿಮ್ಮ ಮನಸ್ಸನ್ನು ಕೇಂದ್ರೀಕರಿಸುವಿರಿ. ಎಲ್ಲ ಕೆಲಸಗಳಲ್ಲೂ ನಷ್ಟ ಉಂಟಾಗುವುದು. ಲಾಭ ಇರುತ್ತದೆ ಆದರೆ ತೃಪ್ತಿ ಇರುವುದಿಲ್ಲ.
ಕನ್ಯಾ ರಾಶಿ : ಕೆಲ ಕಾರ್ಯ ಹೊರತುಪಡಿಸಿ ಎಲ್ಲಾ ಕಾರ್ಯಗಳಲ್ಲಿ ಯಶಸ್ಸು ಸಿಗಲಿದೆ. ಪ್ರವಾಸದ ಅವಕಾಶ ಹೆಚ್ಚಿರುತ್ತದೆ.
ತುಲಾ ರಾಶಿ : ಹಣ ಉಳಿಸುವ ಪ್ರಯತ್ನ ನಡೆಸಿ. ನಿಮ್ಮ ಕೆಲಸಕ್ಕೆ ಕುಟುಂಬ ಸದಸ್ಯರ ಬೆಂಬಲ ಸಿಗಲಿದೆ. ಮುಖ್ಯ ಕೆಲಸವನ್ನು ಮುಂದೂಡುವುದು ಉತ್ತಮ.
ವೃಶ್ಚಿಕ ರಾಶಿ : ನಿಷ್ಪ್ರಯೋಜಕ ಆಲೋಚನೆಗಳಲ್ಲಿ ಸಮಯ ವ್ಯರ್ಥ ಮಾಡಬೇಡಿ. ಆರ್ಥಿಕ ಸ್ಥಿತಿ ಸುಧಾರಿಸಲಿದೆ.
ಧನು ರಾಶಿ : ಬೇರೆಯವರ ಕೆಲಸದಲ್ಲಿ ಹಸ್ತಕ್ಷೇಪ ಮಾಡಬೇಡಿ. ಖ್ಯಾತಿಯ ನಷ್ಟವಾಗಬಹುದು. ಹಣದ ವಿಚಾರವಾಗಿ ಗಲಾಟೆ ಸಾಧ್ಯತೆ.
ಮಕರ ರಾಶಿ : ಕೆಲಸ ಸುಲಭವಾಗಲಿದೆ. ಶಾಂತಿಯಿಂದ ಕೆಲಸ ಮಾಡಿ.
ಕುಂಭ ರಾಶಿ : ಸೋಮಾರಿತನ ನಿಮ್ಮನ್ನು ಕಾಡಬಹುದು. ಕಡಿಮೆ ಸಮಯದಲ್ಲಿ ಹೆಚ್ಚು ಹಣ ಗಳಿಸುವ ಆಸೆಗೆ ಬೀಳಬೇಡಿ.
ಮೀನ ರಾಶಿ : ಕಡಿಮೆ ಸಮಯ ಕೆಲಸ ಮಾಡಿದರೂ ಹೆಚ್ಚು ಲಾಭ ಗಳಿಸುವಿರಿ. ಶತ್ರುಗಳು ಹೆಚ್ಚಾಗಬಹುದು. ತಾಳ್ಮೆಯಿಂದಿರಿ.