ಹಿಂದೂ ಧರ್ಮದಲ್ಲಿ ಸೂರ್ಯನಿಗೆ ದೇವರ ಸ್ಥಾನ ನೀಡಲಾಗಿದೆ. ಭಕ್ತರ ಕಣ್ಣಿಗೆ ಕಾಣಿಸಿಕೊಳ್ಳುವ ದೇವರು ಸೂರ್ಯ. ಜಾತಕದಲ್ಲಿ ಸೂರ್ಯನ ಸ್ಥಾನ ಬಲವಾಗಿದ್ದರೆ ವ್ಯಕ್ತಿ ಜೀವನದಲ್ಲಿ ಸಾಕಷ್ಟು ಯಶಸ್ಸು ಮತ್ತು ಖ್ಯಾತಿ ಗಳಿಸುತ್ತಾನೆ ಎಂದು ಹೇಳಲಾಗುತ್ತದೆ. ಜಾತಕದಲ್ಲಿ ಸೂರ್ಯನ ಸ್ಥಾನ ಸರಿಯಾಗಿಲ್ಲದಿದ್ದರೆ ಜೀವನದಲ್ಲಿ ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಪ್ರತಿದಿನ ಸೂರ್ಯನಿಗೆ ಜಲವನ್ನು ಅರ್ಪಿಸುವುದರಿಂದ ಸಮಸ್ಯೆಗಳು ದೂರವಾಗುತ್ತವೆ. ಭಾನುವಾರವನ್ನು ಸೂರ್ಯನ ಆರಾಧನೆಗೆ ಮೀಸಲಿಡಲಾಗಿದೆ. ಭಕ್ತರು, ಸೂರ್ಯನಿಗೆ ಅರ್ಘ್ಯವನ್ನು ಅರ್ಪಿಸಿ ಪೂಜೆ ಮಾಡುತ್ತಾರೆ. ಜೀವನದಲ್ಲಿ ಯಶಸ್ಸು ಪ್ರಾಪ್ತಿಯಾಗ್ಬೇಕು ಅಂದ್ರೆ ಭಾನುವಾರ ಸೂರ್ಯನ ಪೂಜೆ ಮಾಡ್ಬೇಕು. ಜಲವನ್ನು ಅರ್ಪಿಸಬೇಕು. ಹಾಗೆಯೇ ಉಪವಾಸ ಮಾಡ್ಬೇಕು. ಸೂರ್ಯದೇವನನ್ನು ಮೆಚ್ಚಿಸಲು ದಾನ ಕೂಡ ಒಳ್ಳೆಯ ಉಪಾಯವಾಗಿದೆ. ನೀವು ಕೆಲ ವಸ್ತುಗಳನ್ನು ದಾನ ಮಾಡಿದ್ರೆ ಸೂರ್ಯ ನಿಮಗೆ ಒಲಿಯುತ್ತಾನೆಂದು ಗ್ರಂಥಗಳಲ್ಲಿ ಹೇಳಲಾಗಿದೆ.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಭಾನುವಾರದಂದು ನಿಮ್ಮ ತೂಕಕ್ಕೆ ಸಮನಾಗಿ ಗೋಧಿಯನ್ನು ದಾನ ಮಾಡಬೇಕು. ಇದು ವ್ಯಾಪಾರದಲ್ಲಿ ಪ್ರಗತಿ ಹೆಚ್ಚಿಸುತ್ತದೆ. ಹಾಗೆಯೇ ನಿರುದ್ಯೋಗಿಗಳಿಗೆ ಉದ್ಯೋಗ ಲಭ್ಯವಾಗುತ್ತದೆ.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಭಾನುವಾರ ಕೆಂಪು ಬೇಳೆಯನ್ನು ಬ್ರಾಹ್ಮಣರಿಗೆ ದಾನ ಮಾಡಿದ್ರೆ ಜಾತಕದಲ್ಲಿರುವ ದೋಷ ನಿವಾರಣೆಯಾಗುತ್ತದೆ.
ಭಾನುವಾರದಂದು ಸೂರ್ಯ ದೇವನಿಗೆ ಬೆಲ್ಲ ಹಾಗೂ ಅನ್ನವನ್ನು ಅರ್ಪಿಸುವುದ್ರಿಂದ ವ್ಯಾಪಾರ ಕ್ಷೇತ್ರದಲ್ಲಿ ಪ್ರಗತಿ ಕಾಣುವಿರಿ. ಹಾಗೆಯೇ ಭಾನುವಾರದಂದು ಸೂರ್ಯನಿಗೆ ಅರ್ಘ್ಯವನ್ನು ಅರ್ಪಿಸಿದ್ರೆ ಶುಭವಾಗಲಿದೆ. ತಾಮ್ರದ ಪಾತ್ರೆಯಲ್ಲಿ ಅಕ್ಷತೆ ಹಾಕಿ, ನೀರನ್ನು ಹಾಕಿ ಸೂರ್ಯನಿಗೆ ಅರ್ಘ್ಯವನ್ನು ಅರ್ಪಿಸುವುದರಿಂದ ಶಕ್ತಿ, ಬುದ್ಧಿವಂತಿಕೆ, ಆರೋಗ್ಯ ಮತ್ತು ಗೌರವ ಪ್ರಾಪ್ತಿಯಾಗುತ್ತದೆ.
ಭಾನುವಾರದಂದು ಕೆಂಪು ಚಂದನದ ಮಾಲೆ ಹಿಡಿದು ಸೂರ್ಯನ ಮಂತ್ರವನ್ನು ಜಪಿಸಬೇಕು. ಮನೆಯಿಂದ ಹೊರಗೆ ಹೋಗುವ ವೇಳೆ ಕೆಂಪು ಶ್ರೀಗಂಧವನ್ನು ಹಣೆಗೆ ಹಚ್ಚಿಕೊಂಡು ಹೋಗಬೇಕು. ಇದ್ರಿಂದ ಧೈರ್ಯ ಬರುವುದಲ್ಲದೆ, ಕೆಲಸದಲ್ಲಿ ಯಶಸ್ಸು ಲಭಿಸುತ್ತದೆ.