alex Certify BIG NEWS: ಬೆಂಗಳೂರಿನ ಶೇ.87 ಜನರಿಗೆ ವಾರ್ಡ್ ಸಮಿತಿ ಬಗ್ಗೆ ಗೊತ್ತೇ ಇಲ್ಲ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಬೆಂಗಳೂರಿನ ಶೇ.87 ಜನರಿಗೆ ವಾರ್ಡ್ ಸಮಿತಿ ಬಗ್ಗೆ ಗೊತ್ತೇ ಇಲ್ಲ….!

ಸಿಲಿಕಾನ್ ಸಿಟಿಯ ಬಹುಪಾಲು ಮತದಾರರಿಗೆ ವಾರ್ಡ್ ಸಮಿತಿಗಳ ಬಗ್ಗೆ ಅರಿವೇ ಇಲ್ಲವಂತೆ ! ಈ ಬಗ್ಗೆ ನಡೆಸಿದ ಸಮೀಕ್ಷೆಯೊಂದರಲ್ಲಿ ಶೇ.87 ರಷ್ಟು ಮತದಾರರು ತಮಗೆ ವಾರ್ಡ್ ಸಮಿತಿಗಳ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ಹೇಳಿಕೊಂಡಿದ್ದಾರೆ.

ಸ್ವಯಂ ಸೇವಾ ಸಂಸ್ಥೆಯಾಗಿರುವ ಜನಾಗ್ರಹ 27 ವಾರ್ಡುಗಳಲ್ಲಿ ಈ ಸಮೀಕ್ಷೆಯನ್ನು ನಡೆಸಿ 506 ಮತದಾರರ ಅಭಿಪ್ರಾಯ ಸಂಗ್ರಹಿಸಿದೆ. ಇವರಲ್ಲಿ ಶೇ.17 ರಷ್ಟು ಜನರು ತಮಗೆ ಹಿಂದಿನ ಮೇಯರ್ ಹೆಸರು ಏನೆಂಬುದು ತಿಳಿದಿಲ್ಲ ಎಂದಿದ್ದಾರೆ.

ಬೆಂಗಳೂರು ಸಬರ್ಬನ್ ರೈಲು ಯೋಜನೆ ಯಾರ ಕನಸಿನ ಕೂಸು…? ಬಿಜೆಪಿ ನಾಯಕರಿಗೆ HDK ಪ್ರಶ್ನೆ

ಇನ್ನು ಬೆಸ್ಕಾಂ, ಬಿಬಿಎಂಪಿ, ಜಲಮಂಡಳಿ ಸೇರಿದಂತೆ ಮತ್ತಿತರೆ ಇಲಾಖೆಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ನಿವಾರಿಸಲು ನೇಮಕಗೊಳ್ಳುವ ವಾರ್ಡ್ ಸಮಿತಿ ಬಗ್ಗೆ ತಮಗೆ ಗೊತ್ತೇ ಇಲ್ಲ ಎಂದು ಹೇಳಿರುವುದು ಆಶ್ಚರ್ಯವನ್ನುಂಟು ಮಾಡಿದೆ.

ಮುಂದಿನ ಸೆಪ್ಟಂಬರ್ ಅಥವಾ ಅಕ್ಟೋಬರ್ ನಲ್ಲಿ ಬಿಬಿಎಂಪಿಗೆ ಚುನಾವಣೆ ನಡೆಯುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಸಮೀಕ್ಷೆ ಕೈಗೊಳ್ಳಲಾಗಿದ್ದು, ಇದರಲ್ಲಿ ನಗರದ ಮೂಲಸೌಕರ್ಯ ಸೇರಿದಂತೆ ಇನ್ನಿತರೆ ವಿಚಾರಗಳ ಬಗ್ಗೆ ಒಟ್ಟು 29 ಪ್ರಶ್ನಾವಳಿಗಳನ್ನು ಮತದಾರರ ಮುಂದಿಡಲಾಗಿತ್ತು. ಈ ಪೈಕಿ ಶೇ.23 ರಷ್ಟು ಮಂದಿ ಪಾದಚಾರಿ ಮಾರ್ಗ ಸೌಲಭ್ಯ ಬೇಕು ಎಂದು ಹೇಳಿದ್ದರೆ, ಶೇ.16 ರಷ್ಟು ಜನರು ವಾಹನ ದಟ್ಟಣೆ ಕಡಿಮೆ ಆಗಬೇಕೆಂದು ಬಯಸಿದ್ದಾರೆ. ಇನ್ನು ಶೇ.15 ರಷ್ಟು ಜನರು ತಮಗೆ ಶುದ್ಧ ಕುಡಿಯುವ ನೀರಿನ ಸಮಸ್ಯೆ ಇದೆ ಎಂದು ಹೇಳಿಕೊಂಡಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...