alex Certify ಸುಳ್ಳಾದವು ಸಮೀಕ್ಷೆ, ನಿಜವಾಯ್ತು ದ್ವಾರಕನಾಥ್ ಗುರೂಜಿ ಭವಿಷ್ಯ: ಪ್ರಧಾನಿಯಾದರೂ ಪೂರ್ಣಾವಧಿ ಪೂರೈಸದ ಮೋದಿ…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸುಳ್ಳಾದವು ಸಮೀಕ್ಷೆ, ನಿಜವಾಯ್ತು ದ್ವಾರಕನಾಥ್ ಗುರೂಜಿ ಭವಿಷ್ಯ: ಪ್ರಧಾನಿಯಾದರೂ ಪೂರ್ಣಾವಧಿ ಪೂರೈಸದ ಮೋದಿ…?

ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟ 400 ಸ್ಥಾನಗಳ ಸಮೀಪ ಗೆಲ್ಲಲಿದೆ ಎಂದು ಸಮೀಕ್ಷೆಗಳು ಹೇಳಿದ್ದವು. ಬಹುತೇಕ ಎಲ್ಲಾ ಸಮೀಕ್ಷೆಗಳು ‘ಅಬ್ ಕಿ ಬಾರ್ 400 ಪಾರ್’ ಹೇಳಿಕೆಗೆ ಪೂರಕ ಎನ್ನುವಂತೆ ಈ ಬಾರಿ ಬಿಜೆಪಿ ತತ್ವದ ಎನ್.ಡಿ.ಎ. ಬಹುಮತ ಮೀರಿ 400 ಸ್ಥಾನಗಳ ಸಮೀಪ ಬರುತ್ತದೆ ಎಂದು ಸಮೀಕ್ಷೆಗಳ ಭವಿಷ್ಯ ನುಡಿದಿದ್ದವು.

ಆದರೆ ನಿಖರ ಭವಿಷ್ಯಕ್ಕೆ ಹೆಸರಾದ ರಾಜಗುರು ದ್ವಾರಕನಾಥ್ ಅವರು ಹೇಳಿದ ಭವಿಷ್ಯ ನಿಜವಾಗಿದೆ. ಕುಜ -ಶನಿ ಸಮಾಗಮದ ಪರಿಣಾಮ ಲೋಕಸಭೆ ಚುನಾವಣೆಯಲ್ಲಿ ಆಡಳಿತರೂಢ ಪಕ್ಷ ಪುನಃ ಗೆಲ್ಲಲು ಸಾಕಷ್ಟು ಕಷ್ಟ ಪಡಬೇಕಾಗುತ್ತದೆ. 400 ಸ್ಥಾನ ಗೆಲ್ಲುವುದು ಕನಸಿನ ಮಾತು. 240 ಸ್ಥಾನ ಗೆದ್ದರೂ ಹೆಚ್ಚು. ಮೈತ್ರಿ ಪಕ್ಷಗಳ ಸಹಕಾರದಿಂದಲೇ ಸರ್ಕಾರ ರಚಿಸಬೇಕಾದ ವಾತಾವರಣ ನಿರ್ಮಾಣವಾಗುತ್ತದೆ. ಕಳೆದ 10 ವರ್ಷದಲ್ಲಿ ಆಡಳಿತ ನಡೆಸಿದಂತೆ ಮುಂದೆ ಪರಿಸ್ಥಿತಿ ಇರುವುದಿಲ್ಲ ಎಂದು ದ್ವಾರಕನಾಥ್ ಗುರೂಜಿ ಹೇಳಿದ ಭವಿಷ್ಯ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಇನ್ನು ನರೇಂದ್ರ ಮೋದಿ ಮುಂದೆ ಪ್ರಧಾನಿಯಾದರೂ ಅಷ್ಟು ಸುಲಭವಾಗಿ ಸರ್ಕಾರ ನಡೆಸಲು ಆಗುವುದಿಲ್ಲ. ಮುಂದಿನ ಐದು ವರ್ಷ ಕಳೆಯುವುದು ಕಷ್ಟವಾಗುತ್ತದೆ. ಯಾರಿಂದ ಅವಕಾಶ ಪಡೆದುಕೊಂಡಿದ್ದರೋ ಅವರಿಂದ ವಿರೋಧ ಎದುರಿಸಬೇಕಾಗುತ್ತದೆ. ಯಾರನ್ನು ನಂಬಿರುತ್ತಾರೋ ಅವರೇ ಎದುರಾಗುತ್ತಾರೆ. ಮೋದಿ 2026ರವರೆಗೂ ಇರಬಹುದು. ಕುಜ- ಶನಿ ಒಂದು ಮನೆಗೆ ಬಂದ ನಂತರ ಬದಲಾವಣೆ ಖಚಿತವೆಂದು ಗುರೂಜಿ ವರ್ಷ ಭವಿಷ್ಯದಲ್ಲಿ ಉಲ್ಲೇಖಿಸಿದ್ದರೆನ್ನಲಾಗಿದ್ದು, ಈಗ ಜಾಲತಾಣಗಳಲ್ಲಿ ವೈರಲ್ ಆಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...