ಮೊಸಳೆಗಳು ಅತ್ಯಂತ ಅಪಾಯಕಾರಿ ಸರೀಸೃಪಗಳಲ್ಲಿ ಒಂದು. ಅತ್ಯಂತ ಧೈರ್ಯಶಾಲಿ ಎಂದು ಹೇಳಿಕೊಳ್ಳುವ ಮನುಷ್ಯನನ್ನು ಸುಲಭದಲ್ಲಿ ಮೊಸಳೆಗಳು ಹೆದರಿಸಬಲ್ಲುದು. ಅದರಲ್ಲಿಯೂ ಮೊಸಳೆಗಳು ಭಯಂಕರ ಸರೀಸೃಪಗಳಾಗಿದ್ದು, ಅವುಗಳ ಹಿಡಿತದಿಂದ ತಪ್ಪಿಸಿಕೊಳ್ಳುವುದು ಸುಲಭವಲ್ಲ. ತಮ್ಮ ಬಾಯಿಗೆ ಸಿಕ್ಕ ಪ್ರಾಣಿ, ಮನುಷ್ಯರ ಮೂಳೆಗಳನ್ನು ಪುಡಿಮಾಡಿ ನಂತರ ಇಡೀ ಬೇಟೆಯನ್ನು ನುಂಗುತ್ತವೆ.
ಇದು ಒಂದು ಮೊಸಳೆ ಕಥೆಯಾದರೆ ಇನ್ನೂ ಅನೇಕ ಮೊಸಳೆಗಳು ಒಟ್ಟಿಗೇ ಸಮೀಪಿಸಿದರೆ ಕಥೆ ಏನಾಗಬೇಡ? ಅಂಥದ್ದೇ ಒಂದು ವಿಡಿಯೋ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಒಬ್ಬ ವ್ಯಕ್ತಿ ಏಣಿಯ ಸಹಾಯದಿಂದ ಮರವೇರಿದ್ದಾನೆ. ಹಲವಾರು ಮೊಸಳೆಗಳು ಏಣಿಯ ಮೇಲೆ ನಿಂತಿರುವ ವ್ಯಕ್ತಿಯ ಬಳಿಗೆ ಬರುತ್ತಿರುವುದನ್ನು ನೋಡಬಹುದು.
9 ಸೆಕೆಂಡ್ನ ಈ ವಿಡಿಯೋ ನೋಡಿದರೆ ಭೀತಿ ಹುಟ್ಟಿಸುತ್ತಿದೆ. @ViciousVideos ಎಂಬ ಟ್ವಿಟರ್ನಲ್ಲಿ ಇದರ ವಿಡಿಯೋ ವೈರಲ್ ಆಗಿದೆ. ವಿಡಿಯೋದಲ್ಲಿ ಒಬ್ಬ ವ್ಯಕ್ತಿ ನೆಲದ ಮೇಲೆ ಹಲವಾರು ಮೊಸಳೆಗಳ ನಡುವೆ ಏಣಿಯ ಮೇಲೆ ನಿಂತಿದ್ದಾನೆ. ಈ ಅಪಾಯಕಾರಿ ಸರೀಸೃಪಗಳಿಂದ ಪಾರಾಗಲು ಆತ ಏಣಿಯ ಸಹಾಯವನ್ನು ತೆಗೆದುಕೊಂಡಿದ್ದಾನೆ. ಆದರೆ ಆತನನ್ನು ಗುರಿಯಿಟ್ಟು ಮೊಸಳೆಗಳು ಹರಿದಾಡುವಂತೆ ತೋರುತ್ತಿದೆ.
ಹಿನ್ನೆಲೆಯಲ್ಲಿ ಬಚಾವ್ ಬಚಾವ್ (ರಕ್ಷಿಸಿ) ಎನ್ನುವುದನ್ನು ಕೇಳಬಹುದು. ವಿಡಿಯೋ ಬೆಚ್ಚಿಬೀಳಿಸುವಂತಿದ್ದು, ಅಂತರ್ಜಾಲದಲ್ಲಿ ಭಯ ಹುಟ್ಟಿಸಿದೆ. ಈ ಮೊಸಳೆಗಳು ಏಣಿಯನ್ನು ನಿರಂತರವಾಗಿ ಅಲುಗಾಡಿಸುತ್ತ ವ್ಯಕ್ತಿಯನ್ನು ಬೀಳುವಂತೆ ಮಾಡಲು ಪ್ರಯತ್ನಿಸುತ್ತಿವೆ. ಈ ಭಯಾನಕ ವಿಡಿಯೋ 1.62 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದೆ.
https://twitter.com/ViciousVideos/status/1623261605944528897?ref_src=twsrc%5Etfw%7Ctwcamp%5Etweetembed%7Ctwterm%5E1623261605944528897%7Ctwgr%5E31dbd3ebfe0c5ddc957ff1450b90250043766d44%7Ctwcon%5Es1_&ref_url=https%3A%2F%2Fwww.news18.com%2Fbuzz%2Fwatch-man-surrounded-by-crocodiles-stands-atop-a-ladder-internet-terrified-7104091.html