
ಇಂದು ಉತ್ತರಪ್ರದೇಶದಲ್ಲಿ ನಾಲ್ಕನೇ ಹಂತದ ಚುನಾವಣೆ ನಡೆಯುತ್ತಿದೆ. ಈ ಸಂದರ್ಭದಲ್ಲಿ ರೈತರ ಹತ್ಯೆಯ ಆರೋಪ ಹೊತ್ತಿರುವ ಅಶಿಶ್ ಮಿಶ್ರಾ ಅವರ ತಂದೆ, ಕೇಂದ್ರ ಸಚಿವ ಹಾಗೂ ಬಿಜೆಪಿ ನಾಯಕ ಅಜಯ್ ಮಿಶ್ರಾ ಲಖಿಂಪುರದ ಮತಗಟ್ಟೆಯಲ್ಲಿ ನೂರಾರು ಪೊಲೀಸರು ಹಾಗೂ ಅರೆಸೈನಿಕ ಪಡೆಯ ಬಿಗು ಬಂದೋಬಸ್ತ್‌ನಲ್ಲಿ ಮತದಾನದ ಹಕ್ಕನ್ನು ಚಲಾಯಿಸಿದ್ದಾರೆ.
ಲಖಿಂಪುರ ಹಿಂಸಾಚಾರದ ಪ್ರಕರಣದಲ್ಲಿ, 2021ರ ಅಕ್ಟೋಬರ್ ತಿಂಗಳಲ್ಲಿ ಜೈಲು ಪಾಲಾಗಿದ್ದ ಆಶಿಶ್ ಮಿಶ್ರಾ, ಚುನಾವಣಾ ಪ್ರಚಾರದ ಸಮಯದಲ್ಲಿ ಜಾಮೀನು ಮೂಲಕ ಹೊರಬಂದಿದ್ದರು. ನಿಘಸನ್ ವಿಧಾನಸಭೆ ಕ್ಷೇತ್ರದಲ್ಲಿ ಬೆಳಗ್ಗೆ ಸುಮಾರು 11:30 ರ ಸಮಯದಲ್ಲಿ ಬಿಗಿ ಬಂದೋಬಸ್ತ್ ನಲ್ಲಿ ಅಜಯ್ ಮಿಶ್ರಾ ಮತ ಚಲಾಯಿಸಿದ್ದಾರೆ.
ಪಾತ್ರೆ ತೊಳೆಯಲು ಹೇಳಿದ ತಾಯಿಯನ್ನ ಬಾಣಲೆಯಿಂದ ಹೊಡೆದು ಸಾಯಿಸಿದ ಅಪ್ರಾಪ್ತ ಬಾಲಕಿ…..!
ಮತ ಚಲಾಯಿಸಿದ್ದೆ ತಡ ಹಲವಾರು ಸುದ್ದಿಗಾರರು ಮಿಶ್ರಾ ಅವರನ್ನು ಲಖಿಂಪುರ ಹಿಂಸಾಚಾರದ ಬಗ್ಗೆ ದೂರದಿಂದಲೆ ಪ್ರಶ್ನಿಸಿದ್ದಾರೆ. ಏಕೆಂದರೆ ಮಿಶ್ರಾ ಅವರ ಬಳಿ ಸುಳಿಯಲು ಆಗದಂತ ಸೆಕ್ಯುರಿಟಿ ನೀಡಲಾಗಿತ್ತು. ಮಿಶ್ರಾ ಅವರು ಸುದ್ದಿಗಾರರ ಪ್ರಶ್ನೆಗೆ ದೂರದಿಂದಲೇ ವಿಕ್ಟರಿ ಚಿಹ್ನೆಯ ಮೂಲಕ ಉತ್ತರಿಸಿದ್ರು. ಇನ್ಯಾವುದೇ ಹೇಳಿಕೆ ನೀಡದ ಅವರು ಕೇವಲ ವಿಕ್ಟರಿ ಚಿಹ್ನೆ ಮೂಲಕ ಕಾರ್ಯಕರ್ತರಿಗೆ ಗೆಲುವಿನ ಭರವಸೆ ನೀಡಿದ್ರು.