![Pro Kabaddi: Bengaluru Bulls register thrilling win over Patna Pirates; Dabang Delhi stun U Mumba](https://sc0.blr1.cdn.digitaloceanspaces.com/article/197317-hrfonogjaf-1704773727.jpg)
ಬೆಂಗಳೂರು ಬುಲ್ಸ್ ನ ಡಿಫೆಂಡರ್ ಸುರ್ಜಿತ್ ಸಿಂಗ್ ನಿನ್ನೆಯ ಪಂದ್ಯದಲ್ಲಿ 400 ಟ್ಯಾಕಲ್ಸ್ ಪಾಯಿಂಟ್ಸ್ ಗಳ ಗಡಿ ಮುಟ್ಟಿದ್ದಾರೆ. ಈ ಮೂಲಕ ಪ್ರೊ ಕಬಡ್ಡಿ ಇತಿಹಾಸದಲ್ಲಿ 400 ಪಾಯಿಂಟ್ ಪಡೆದಿರುವ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಬೆಂಗಳೂರು ಬುಲ್ಸ್ ನ ಪ್ರತಿಯೊಬ್ಬ ಆಟಗಾರರು ಚಪ್ಪಾಳೆ ತಟ್ಟುವ ಮೂಲಕ ಸುರ್ಜಿತ್ ಸಿಂಗ್ ಅವರಿಗೆ ಗೌರವ ಸಲ್ಲಿಸಿದ್ದಾರೆ.
ಪ್ರೊ ಕಬಡ್ಡಿ ಇತಿಹಾಸದಲ್ಲಿ ಇರಾನಿ ಆಟಗಾರ ಫಾಜೆಲ್ ಸುಲ್ತಾನ್ ಅತ್ರಾಚಲಿ ಈವರೆಗೂ 474 ಪಾಯಿಂಟ್ ಪಡೆದು ಆಗ್ರ ಸ್ಥಾನದಲ್ಲಿದ್ದರೆ ಇವರನ್ನು ಬಿಟ್ಟರೆ ಅತಿ ಹೆಚ್ಚು ಪಾಯಿಂಟ್ ಪಡೆದಿರುವವರಲ್ಲಿ ಸುರ್ಜಿತ್ ಸಿಂಗ್ ಎರಡನೇ ಆಟಗಾರರಾಗಿದ್ದಾರೆ.
ಪ್ರೊ ಕಬಡ್ಡಿ ಲೀಗ್ ನಲ್ಲಿ ಅತಿ ಹೆಚ್ಚು ಪಡೆದವರ ಪಟ್ಟಿ ಈ ರೀತಿ ಇದೆ.
ಆಟಗಾರ ಪಂದ್ಯ ಟ್ಯಾಕಲ್ಸ್ ಪಾಯಿಂಟ್ಸ್
ಫಾಜೆಲ್ ಸುಲ್ತಾನ್ ಅತ್ರಾಚಲಿ 164 474
ಸುರ್ಜಿತ್ ಸಿಂಗ್ 145 402
ಮಂಜಿತ್ ಚಿಲ್ಲರ್ 132 391
ಗಿರೀಶ್ ಮಾರುತಿ 147 362
ಸಂದೀಪ್ ನರ್ವಾಲ್ 156 360
![Pro Kabaddi: పీకేఎల్లో చరిత్ర సృష్టించిన లెజెండ్ ప్లేయర్.. దెబ్బకు ప్లే ఆఫ్ రేసు నుంచి మాజీ ఛాంపియన్.. - Telugu News | Surjeet singh created history in pkl 10 bengaluru bulls ...](https://images.tv9telugu.com/wp-content/uploads/2024/02/pkl-surjeet-singh.jpg)