
ಅದೇ ರೀತಿ ಬಾಲಿವುಡ್ ಶೆಹನ್‍ಷಾ ಅಮಿತಾಭ್ ಬಚ್ಚನ್ ಅವರು ಕೂಡ ಈ ಸಿನಿಮಾ ನೋಡಿ ಮೆಚ್ಚಿಕೊಂಡು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಇದಕ್ಕೆ ವಿನಮ್ರ ಧನ್ಯವಾದ ಅರ್ಪಿಸಿರುವ ನಟ ಸೂರ್ಯ ಅವರು, ನಿಮ್ಮ ಮೆಚ್ಚುಗೆಯ ಮಾತುಗಳು ನನಗೆ ಭಾರಿ ಸಂತೋಷ ಕೊಟ್ಟಿದೆ. ಮುಂದಿನ ನಟನೆಗೆ ಹುಮ್ಮಸ್ಸು ಕೊಟ್ಟಿದೆ. ಹೃದಯವನ್ನು ಸ್ಪರ್ಶಿಸಿದೆ” ಎಂದಿದ್ದಾರೆ.
ಇದಕ್ಕೂ ಮುನ್ನ ಬಿಗ್ ಬಿ ಕೂಡ ಮಾಡಿದ್ದ ಮೆಚ್ಚುಗೆಯ ಟ್ವೀಟ್‍ನಲ್ಲಿ, “ತಂದೆ ಮತ್ತು ಮಗನ ನಡುವಿನ ಬಾಂಧವ್ಯವನ್ನು ಕಟ್ಟಿಕೊಟ್ಟಿರುವ ಸೂರ್ಯ ಅಭಿನಯದ ಸೂರರೈ ಪೊಟ್ರೂ ಸಿನಿಮಾದ ಕೊನೆಯ ಹಾಡು ನೋಡಿ ಕಣ್ಣಂಚು ಒದ್ದೆಯಾಯಿತು. ಇಂಥ ಹಾಡೇ ಇಡೀ ಸಿನಿಮಾದ ಜೀವಾಳ” ಎಂದಿದ್ದರು.
ಅಂದಹಾಗೆ, ಸುಧಾ ಕೊಂಗರ ನಿರ್ದೇಶಿಸಿರುವ ಸೂರರೈ ಪೊಟ್ರೂ ಸಿನಿಮಾಕ್ಕೆ ಸ್ಫೂರ್ತಿ ಏರ್ ಡೆಕ್ಕನ್ ಸಂಸ್ಥಾಪಕರು ಹಾಗೂ ಕನ್ನಡಿಗರಾದ ಜಿ.ಆರ್. ಗೋಪಿನಾಥ್ ಎನ್ನುವುದು ವಿಶೇಷ. ನಟಿ ಅಪರ್ಣಾ ಜತೆಗೆ ಸೂರ್ಯ ನಟಿಸಿರುವ ಹಲವು ದೃಶ್ಯಗಳು ಅಭಿಮಾನಿಗಳ ಮನಗೆದ್ದಿದೆ.