ಕೋವಿಡ್ ಸೋಂಕಿನ ಕಾಟದ ನಡುವೆಯೇ ಎಲ್ಲಾ ಪದಾರ್ಥಗಳ ಬೆಲೆ ಏರಿಕೆಯಾಗಿರುವ ಬಿಸಿ ಅನುಭವಿಸುತ್ತಿರುವ ಜನಸಾಮಾನ್ಯರಿಗೆ ದಿನನಿತ್ಯದ ಬಳಕೆ ವಸ್ತುಗಳ ಪೂರೈಕೆದಾರ ಹಿಂದೂಸ್ತಾನ್ ಯೂನಿಲಿವರ್ ತನ್ನ ಉತ್ಪನ್ನಗಳ ಬೆಲೆಗಳ ಏರಿಕೆಯ ಹೊಡೆತ ಕೊಟ್ಟಿದೆ.
ತನ್ನ ಡಿಟರ್ಜೆಂಟ್ಗಳು ಹಾಗೂ ಸೋಪ್ ಬಾರ್ಗಳ ಬೆಲೆಯನ್ನು ಕಳೆದ ಒಂದು ತಿಂಗಳಿನಿಂದ 3.5% – 14%ವರೆಗೂ ಏರಿಸಿದೆ ಯೂನಿಲಿವರ್.
SHOCKING: ಓಣಂ ಸಂದರ್ಭದ ಬೆನ್ನಲ್ಲೇ ಕೇರಳದಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಭಾರೀ ಏರಿಕೆ….!
ವೀಲ್ ಡಿಟರ್ಜೆಂಟ್ನ ಅರ್ಧ ಹಾಗೂ ಒಂದು ಕಿಲೋ ಪ್ಯಾಕೆಟ್ನ ಬೆಲೆಯಲ್ಲಿ 1-2 ರೂ.ಗಳ ಏರಿಕೆಯಾಗುವ ಸಾಧ್ಯತೆ ಇದೆ. ಅರ್ಧ ಕೆಜಿ ವೀಲ್ ಪುಡಿಯು 28 ರೂ.ನಿಂದ 29 ರೂ.ಗೆ ಏರಿಕೆಯಾದರೆ ಒಂದು ಕಿಲೋ ವೀಲ್ ಪುಡಿಯು 56 – 57ರೂ.ನಿಂದ 58 ರೂ.ಗೆ ಹೆಚ್ಚಲಿದೆ.
ಇದೇ ವೇಳೆ ರಿನ್ ಡಿಟರ್ಜೆಂಟ್ ಪುಡಿಯ ಬೆಲೆ 77 ರೂ.ನಿಂದ 82 ರೂ.ಗೆ ಏರಲಿದೆ. ಇದೇ ವೇಳೆ 10 ರೂ. ಸ್ಯಾಶೆಯಲ್ಲಿ 150 ಗ್ರಾಂ ಡಿಟರ್ಜೆಂಟ್ ಕೊಡುತ್ತಿದ್ದ ರಿನ್ ಇನ್ನು ಮುಂದೆ ಅದೇ ಬೆಲೆಯ ಸ್ಯಾಶೇಯಲ್ಲಿ 130 ಗ್ರಾಂ ಡಿಟರ್ಜೆಂಟ್ ನೀಡಲಿದೆ.
ಲಕ್ಸ್ ಮತ್ತು ಲೈಫ್ಬಾಯ್ ಸೋಪ್ ಬಾರುಗಳ ಬೆಲೆಯಲ್ಲೂ 8-12%ನಷ್ಟು ಏರಿಕೆಯಾಗಲಿದೆ. ಉದಾಹರಣೆಗೆ; ಲಕ್ಸ್ನ 5-ಇನ್-1 ಪ್ಯಾಕ್ 120 ರೂ.ನಿಂದ ಇದೀಗ 128-130 ರೂ.ಗೆ ಏರಿಕೆಯಾಗಿದೆ.
ಚಹಾದಿಂದ ಡಿಟರ್ಜೆಂಟ್ಗಳ ವರೆಗೂ ವಿವಧ ಉತ್ಪನ್ನಗಳ ಬೆಲೆಯನ್ನು ಯೂನಿಲಿವರ್ ಏರಿಕೆ ಮಾಡಿದೆ.