ಕ್ರಿಕೆಟಿಗ ಸುರೇಶ್ ರೈನಾ ಇತ್ತೀಚೆಗಷ್ಟೇ ಇನ್‌ಸ್ಟಾಗ್ರಾಮ್‌ನಲ್ಲಿ ಚಳಿಗಾಲದ ವಿಶೇಷವಾದ ಸಾರ್ಸನ್ ಕಾ ಸಾಗ್ (ಸಾಸಿವೆ ಸೊಪ್ಪಿನ ಗೊಜ್ಜು) ಖಾದ್ಯವನ್ನು ತಯಾರಿಸಿರುವ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ.
ಇದು ಭಾರತದಲ್ಲಿ ವಿಶೇಷವಾಗಿ ಪಂಜಾಬ್‌ನಲ್ಲಿ ಪ್ರಸಿದ್ಧವಾದ ಚಳಿಗಾಲದ ಖಾದ್ಯವಾಗಿದೆ. ಸುರೇಶ್ ರೈನಾ ಮಾಡುತ್ತಿರುವ ಖಾದ್ಯದ ವಿಡಿಯೋ ನೋಡಿದ್ರೆ ನೀವು ಇದೀಗ ಕೆಲವು ಸಾಸಿವೆ ಸೊಪ್ಪಿನ ಗೊಜ್ಜು ಮತ್ತು ಮುಸುಕಿನ ಜೋಳದ ರೊಟ್ಟಿಯನ್ನು ಆರ್ಡರ್ ಮಾಡಲು ಬಯಸಬಹುದು ಎಂದೆನಿಸುತ್ತದೆ.
ಸುರೇಶ್ ರೈನಾ ಅಡುಗೆ ಮಾಡುತ್ತಿರುವ ವಿಡಿಯೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಬುಧವಾರ ಅಪ್‌ಲೋಡ್ ಮಾಡಲಾಗಿದ್ದು, ಒಂದು ಮಿಲಿಯನ್ ವೀಕ್ಷಣೆಗಳನ್ನು ಗಳಿಸಿದೆ. ವೈರಲ್ ವಿಡಿಯೋದಲ್ಲಿ, ಸುರೇಶ್ ರೈನಾ ಪ್ಯಾನ್ ನಲ್ಲಿನ ಸಾರ್ಸನ್ ಸಾಗ್ ಅನ್ನು ಮಗುಚುತಿರುವುದನ್ನು ನೋಡಬಹುದು.
ತಮ್ಮ ವಿಡಿಯೋಗೆ ಹಿನ್ನೆಲೆ ಸಂಗೀತವಾಗಿ ಗುರುದಾಸ್ ಮಾನ್ ಅವರ ಅಪ್ನಾ ಪಂಜಾಬ್ ಹೋವ್ ಹಾಡನ್ನು ಬಳಸಿದ್ದಾರೆ. ಸಾಸಿವೆ ಸೊಪ್ಪಿನ ಗೊಜ್ಜು, ಸಾಸಿವೆ, ಪಾಲಕ್ ಮತ್ತು ಮೆಂತ್ಯ ಎಲೆಗಳಿಂದ ಮಾಡುವ ಖಾದ್ಯವಾಗಿದೆ. ಮಕ್ಕಿ ಕಿ ರೋಟಿ ಅಂದ್ರೆ ಮುಸುಕಿನ ಜೋಳದ ರೊಟ್ಟಿಯೊಂದಿಗೆ ಇದನ್ನು ನೆಚ್ಚಿಕೊಂಡು ತಿಂದ್ರೆ ಸಖತ್ ರುಚಿಯಾಗಿರುತ್ತದೆ.
ಸುರೇಶ್ ರೈನಾ ಮಾಡಿರುವ ಸಾಸಿವೆ ಸೊಪ್ಪಿನ ಗೊಜ್ಜು ವಿಡಿಯೋ ನೋಡಿದ ನೆಟ್ಟಿಗರು ಜೊಲ್ಲು ಸುರಿಸಿದ್ದಾರೆ. ಸುರೇಶ್ ರೈನಾ ಅವರ ಪೋಸ್ಟ್‌ಗೆ ನಟಿ ಮಹಿಮಾ ಚೌಧರಿ ಮತ್ತು ಹಾಸ್ಯನಟಿ ಭಾರತಿ ಸಿಂಗ್ ಕೂಡ ಕಾಮೆಂಟ್ ಮಾಡಿದ್ದಾರೆ. ತನಗೂ ಬೇಕು ಅಂತಾ ಮಹಿಮಾ ಪ್ರತಿಕ್ರಿಯಿಸಿದ್ದಾರೆ.
https://www.youtube.com/watch?v=frFzh8Bc770