ಬೆಂಗಳೂರು: ಜುಲೈ 1 ರಿಂದ ಸಂವೇದಾ ದೂರದರ್ಶನ ಪಾಠ ಆರಂಭಿಸಲಾಗುವುದು. ಒಂದರಿಂದ ಹತ್ತನೇ ತರಗತಿಗೆ ಚಂದನ ವಾಹಿನಿಯ ಮೂಲಕ ಶಿಕ್ಷಣ ನೀಡಲಾಗುವುದು.
ಪ್ರತಿದಿನ ವಿಡಿಯೋ ಮೂಲಕ ಪಾಠ ಪ್ರವಚನ ನಡೆಯಲಿದೆ. ಕನ್ನಡ. ಇಂಗ್ಲಿಷ್. ಉರ್ದು ಮಾಧ್ಯಮದ ಪಾಠ ಪ್ರವಚನಗಳನ್ನು ಬೆಳಗ್ಗೆ 8 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಪ್ರಸಾರ ಮಾಡಲಾಗುವುದು. ತರಗತಿವಾರು ವೇಳಾಪಟ್ಟಿ ನಿಗದಿಪಡಿಸಲಾಗಿದೆ. ಮರಾಠಿ ಮಾಧ್ಯಮದ ಪಾಠಗಳನ್ನು ಯೂಟ್ಯೂಬ್ ಮೂಲಕ ಅಪ್ಲೋಡ್ ಮಾಡಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಮಾಹಿತಿ ನೀಡಿದ್ದಾರೆ.