ಸೂರತ್: ಮನೆಯ ಮುಂದೆ ಆಟವಾಡುತ್ತಿದ್ದ ಬಾಲಕಿಯೊಬ್ಬಳು ಹುಚ್ಚು ನಾಯಿಯನ್ನು ಓಡಿಸಲು ಹೋಗಿ ಅದರಿಂದ ಕಚ್ಚಿಸಿಕೊಂಡ ಪರಿಣಾಮ ತೀವ್ರ ಗಾಯಗಳಾಗಿದ್ದು, ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ಘಟನೆ ಸೂರತ್‌ನಲ್ಲಿ ನಡೆದಿದೆ.
ಘಟನೆಯ ಸಿಸಿಟಿವಿ ದೃಶ್ಯಾವಳಿ ಸೋಮವಾರ ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿದೆ. ಆಕೆಯನ್ನು ತಾಯಿ ರಕ್ಷಿಸಿದ್ದಾರೆ.
ಮೇಘಾ ಎಂಬ ಬಾಲಕಿಗೆ ಭಾರಿ ಗಾಯಗಳಾಗಿದ್ದು, ಆಸ್ಪತ್ರೆಗೆ ಸಾಗಿಸಲಾಗಿದೆ. ಸಿಸಿಟಿವಿಯಲ್ಲಿ ನಾಯಿಯೊಂದು ಓಡಿ ಬರುವುದು ಕಾಣಿಸುತ್ತದೆ. ಮನೆಯ ಮುಂದೆ ನಿಂತಿದ್ದ ಬಾಲಕಿ ಓಡಿಹೋಗುತ್ತಿದ್ದ ಆ ನಾಯಿಯನ್ನು ಓಡಿಸಲು ತಾನು ಅದರ ಹಿಂದೆ ಓಡಿ ಹೋಗಿದ್ದಾಳೆ.
ಇದರಿಂದ ಕ್ರೋಧಗೊಂಡ ನಾಯಿ, ಬಾಲಕಿಯ ಕೆನ್ನೆಯನ್ನು ಹಿಡಿದು ಕಚ್ಚಿದೆ. ಆಕೆಗೆ ಶಸ್ತ್ರಚಿಕಿತ್ಸೆ ಮಾಡಲಾಗಿದ್ದು, ಕೆನ್ನೆಗೆ ಹೊಲಿಗೆ ಹಾಕಲಾಗಿದೆ.
ಸೂರತ್ ಮುನ್ಸಿಪಲ್ ಕಾರ್ಪೊರೇಷನ್ (ಎಸ್‌ಎಂಸಿ) ತಂಡ ಫುಲ್ಪಾಡಾ ಪ್ರದೇಶದಿಂದ ಮೂರ್ನಾಲ್ಕು ನಾಯಿಗಳನ್ನು ಹಿಡಿದಿದೆ ಎಂದು ಎಸ್ಎಂಸಿ ಅಧಿಕಾರಿ ರಾಜೇಶ್ ಘೇಲಾನಿ ತಿಳಿಸಿದ್ದಾರೆ. ಪ್ರತಿನಿತ್ಯ 30 ರಿಂದ 35 ಬೀದಿ ನಾಯಿಗಳನ್ನು ಎಸ್‌ಎಂಸಿ ತಂಡ ಹಿಡಿಯುತ್ತಿದೆ ಎಂದು ಅವರು ಹೇಳಿದ್ದಾರೆ. ಕಳೆದ ವರ್ಷ 7521 ನಾಯಿಗಳನ್ನು ಹಿಡಿಯಲಾಗಿದೆ.