alex Certify ದೇಶ ಕಾಯುವ ಯೋಧರಿಗಾಗಿ ರಾಖಿ ತಯಾರಿಸಿದ ಮಹಿಳೆಯರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದೇಶ ಕಾಯುವ ಯೋಧರಿಗಾಗಿ ರಾಖಿ ತಯಾರಿಸಿದ ಮಹಿಳೆಯರು

ಸೂರತ್: ರಕ್ಷಾಬಂಧನ ಅಂಗವಾಗಿ ಗಡಿಯಲ್ಲಿನ ಸಾವಿರಾರು ಯೋಧರಿಗೆ ತಮ್ಮ ಕೈಗಳಿಂದಲೇ ರಾಖಿ ತಯಾರಿಸುವ ಮೂಲಕ ಗುಜರಾತಿನ ಮಹಿಳೆಯರು ಈ ಕೊರೊನಾ ದಾಳಿ ನಡುವೆ ಉದ್ಯೋಗದ ಆಶಾಕಿರಣ ಕಂಡಿದ್ದಾರೆ.

ಸೋಚ್ ಎಂಬ ಎನ್‍ಜಿಒ ವತಿಯಿಂದ ಬಡ ಮಹಿಳೆಯರು ಮತ್ತು ವಿಕಲಚೇತನ ಮಹಿಳೆಯರಿಗೆ ರಾಖಿ ಮಾಡುವ ಕಲಿಕೆ ನೀಡಲಾಗಿದೆ. ಒಟ್ಟು 7 ಸಾವಿರ ರಾಖಿ ತಯಾರಿಸಿ, ನಾಲ್ವರು ಮಹಿಳೆಯರು ಗಡಿಗೆ ತೆರಳಿ ಯೋಧರನ್ನು ಭೇಟಿ ಮಾಡಿ ರಾಖಿ ಕಟ್ಟಲಿದ್ದಾರೆ. ಇನ್ನು ಕೆಲವರು ವಡೋದರಾದಲ್ಲಿನ ಯೋಧರನ್ನು ಗುರುತಿಸಿ, ರಾಖಿ ಕಟ್ಟಲು ಸಿದ್ಧತೆ ನಡೆಸಿದ್ದಾರೆ.

BIG NEWS: ನಾಲ್ಕೇ ದಿನಗಳಲ್ಲಿ ಎಲ್ಲವೂ ನಿರ್ಧಾರ; ನಿಗಮ ಮಂಡಳಿ ನನಗೆ ಬೇಡ; ಅಸಮಾಧಾನ ಹೊರ ಹಾಕಿದ ಶಾಸಕ ಶ್ರೀಮಂತ ಪಾಟೀಲ್

ಚೀನಾ, ಪಾಕಿಸ್ತಾನದ ಕ್ಯಾತೆಗಳ ನಡುವೆ ನಮ್ಮ ರಾಷ್ಟ್ರವನ್ನು ರಕ್ಷಿಸುತ್ತಿರುವ ಸೋದರರಂಥ ಯೋಧರಿಗೆ ಒಳ್ಳೆಯದಾಗಲಿ ಎಂದು ಶುಭಾಶಯ ಕೋರಲಿದ್ದೇವೆ. ದೇವರಲ್ಲಿಯೂ ಯೋಧರ ಆರೋಗ್ಯ, ಆಯುಷ್ಯಕ್ಕಾಗಿ ಪ್ರಾರ್ಥನೆ ಸಲ್ಲಿಸುತ್ತೇವೆ ಎನ್ನುತ್ತಿದ್ದಾರೆ ಈ ಮಹಿಳೆಯರು.

ವಿಧವೆಯರಿಗೆ ಉದ್ಯೋಗಾವಕಾಶ ನೀಡಿ , ಸ್ವಾವಲಂಬಿಗಳನ್ನಾಗಿಸಲು ಸೋಚ್ ವತಿಯಿಂದ ಈ ರಾಖಿ ತಯಾರಿಕೆ ಯೋಜನೆ ಹಮ್ಮಿಕೊಳ್ಳಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...