ರಕ್ಷಾ ಬಂಧನ ಆಚರಣೆ ಪ್ರಯುಕ್ತ ವಿಶೇಷ ಸಿಹಿ ತಿನಿಸುಗಳನ್ನು ತಯಾರಿಸುವ ಸೂರತ್‌ನ ಅಂಗಡಿಯೊಂದು ಚಿನ್ನ ಲೇಪಿತ ಸಿಹಿತಿನಿಸುಗಳನ್ನು ಮಾರಾಟ ಮಾಡುತ್ತಿದೆ.
ಪ್ರತಿ ಕಿಲೋಗೆ 9000 ರೂಪಾಯಿ ಬೆಲೆಬಾಳುವ ಈ ಚಿನ್ನದ ತಿನಿಸುಗಳು ವಜ್ರದ ನಗರಿಯಲ್ಲಿ ಸರ್ವೇ ಸಾಮಾನ್ಯವಾಗಿ ನೋಡಲು ಸಿಗುತ್ತವೆ.
ನಗರದ ಘೊಡ್ಡೋದ್ ರಸ್ತೆಯಲ್ಲಿರುವ ಸಿಹಿ ತಿನಿಸಿನ ಅಂಗಡಿಯಲ್ಲಿ 24-ಕ್ಯಾರಟ್ ಚಿನ್ನ ಲೇಪಿತ ತಿನಿಸುಗಳು ಸಿಗುತ್ತಿವೆ. ಸಾಮಾನ್ಯವಾಗಿ ಮಿಕ್ಕೆಲ್ಲಾ ತಿನಿಸುಗಳ ಮೇಲೆ ಬೆಳ್ಳಿ ಹಾಳೆಯಿಂದ ಕೋಟಿಂಗ್ ಮಾಡುವ ಈ ಅಂಗಡಿ, ಕಾಜು ಕಟ್ರಿಯಂತ ವಿಶೇಷ ತಿನಿಸುಗಳಿಗೆ ರಕ್ಷಾ ಬಂಧನದ ಪ್ರಯುಕ್ತ ಚಿನ್ನದ ಲೇಪನ ಮಾಡಿದೆ.