ದೇಸೀ ಮಕ್ಕಳಿಗೆ ಬರ್ಫದ ಗೋಲಾ ಅಂದರೆ ಏನೆಂದು ವಿವರಿಸಿ ಹೇಳಬೇಕಾದ ಅಗತ್ಯವೇ ಇಲ್ಲ ನೋಡಿ. ಬಹುತೇಕ ನಮ್ಮೆಲ್ಲರ ಬಾಲ್ಯದ ದಿನಗಳೂ ಈ ಗೋಲಾ ಸವಿದ ಕ್ಷಣಗಳನ್ನು ಹಾದು ಬಂದೇ ಇರುತ್ತವೆ.
ಗುಜರಾತ್ನ ಸೂರತ್ನಲ್ಲಿರುವ ಅಂಗಡಿಯೊಂದು ಗೋಲಾ ಬರ್ಫಕ್ಕೆ ಹೊಸ ಟ್ವಿಸ್ಟ್ ಕೊಟ್ಟು, ಅದರಕ್ಕೆ ರಬ್ಡಿ, ಕ್ರೀಂ, ಮಾವಾ ಹಾಗೂ ಚಾಕಲೇಟ್ ಸಿರಪ್ ಸೇರಿಸಿ ಹೊಸದಂದು ರುಚಿಕರ ಖಾದ್ಯ ಸೃಷ್ಟಿಸಿದೆ. ಇವುಗಳೊಂದಿಗೆ ಒಣಹಣ್ಣುಗಳು, ಚಾಕಲೇಟ್ ಚಿಪ್, ಸ್ಟ್ರಾಬೆರ್ರಿ ಕ್ರಶ್ ಹಾಗೂ ಇನ್ನಿತರ ಸಾಮಗ್ರಿಗಳನ್ನು ಸೇರಿಸಲಾಗಿದೆ.
ಮಳೆಗಾಲದಲ್ಲಿ ಈ ತಿನಿಸುಗಳಿಂದ ಆದಷ್ಟೂ ದೂರವಿರಿ
5.5 ಕೆಜಿ ತೂಕವಿದೆ ಎನ್ನಲಾದ ಈ ಗೋಲಾವನ್ನು ದೇಶದ ಅತಿ ದೊಡ್ಡ ಗೋಲಾ ಎನ್ನಲಾಗಿದೆ. ಫುಡೀ ಇನ್ಕಾರ್ನೇಟ್ ಹೆಸರಿನ ಚಾನೆಲ್ ಹೊಂದಿರುವ ಅಮರ್ ಸಿರೋಹಿ ಎಂಬ ಫುಡಿ ಈ ಗೋಲಾದ ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ.