ಸೂರತ್: ವಿಶ್ವದ ಅತಿ ದೊಡ್ಡ ನೈಸರ್ಗಿಕ ವಜ್ರ ತಯಾರಿಕಾ ಸಂಸ್ಥೆ ಸೂರತ್ ನ ಕಿರಣ್ ಜೆಮ್ಸ್ ಕಂಪನಿ ಸಂಸ್ಥೆಯ 50,000 ಉದ್ಯೋಗಿಗಳಿಗೆ 10 ದಿನ ರಜೆ ಘೋಷಿಸಿದೆ.
ವಜ್ರೋದ್ಯಮ ಬೇಡಿಕೆ ಇಳಿಕೆಯಾಗಿ ವಹಿವಾಟು ಕಡಿಮೆಯಾದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಪಾಲಿಶ್ ಮಾಡಿದ ವಜ್ರ ರಫ್ತು ಮಾಡುವ ಅತಿ ದೊಡ್ಡ ಕಂಪನಿ ಆಗಿರುವ ಕಿರಣ್ ಜೆಮ್ಸ್ ಆಗಸ್ಟ್ 17ರಿಂದ 27ರವರೆಗೆ ಉದ್ಯೋಗಿಗಳಿಗೆ ರಜೆ ಘೋಷಿಸಿದೆ.
ಕಂಪನಿಯ ಅಧ್ಯಕ್ಷ ವಲ್ಲಭಭಾಯಿ ಲಖಾನಿ ಅವರು, ಪ್ರಸ್ತುತ ವಜ್ರೋದ್ಯಮ ಸಂಸ್ಥೆ ಕೆಟ್ಟ ಪರಿಸ್ಥಿತಿಯಲ್ಲಿದೆ. ಬೇಡಿಕೆ ಕುಸಿತವಾಗಿದೆ. ಹೀಗಾಗಿ ಉತ್ಪಾದನೆ ಕಡಿಮೆ ಮಾಡಲು ಕಂಪನಿಯ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಉದ್ಯೋಗಿಗಳಿಗೆ ರಜೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಕಿರಣ್ ಜೆಮ್ಸ್ ಕಂಪನಿ ವಾರ್ಷಿಕ 17000 ಕೋಟಿ ರೂ. ವಹಿವಾಟು ನಡೆಸುತ್ತದೆ. ಜಾಗತಿಕ ಮಾರುಕಟ್ಟೆಯಲ್ಲಿ ಪಾಲಿಶ್ ಮಾಡಿದ ವಜ್ರಗಳಿಗೆ ಬೇಡಿಕೆ ಇಲ್ಲದ ಹಿನ್ನೆಲೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ.