ನವದೆಹಲಿ: ಜಲ್ಲಿಕಟ್ಟು, ಕಂಬಳ, ಚಕ್ಕಡಿ ಸ್ಪರ್ಧೆಗೆ ಸುಪ್ರೀಂಕೋರ್ಟ್ ಅಸ್ತು ಎಂದಿದ್ದು, ಸ್ಪರ್ಧೆಗಳನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಗಳನ್ನು ವಜಾಗೊಳಿಸಿದೆ.
ತಮಿಳುನಾಡಿನ ಜಲ್ಲಿಕಟ್ಟು, ಕೆಸರುಗದ್ದೆಗಳಲ್ಲಿ ಕೋಣಗಳನ್ನು ಓಡಿಸುವ ಕರ್ನಾಟಕದ ಕಂಬಳ ಹಾಗೂ ಮಹಾರಾಷ್ಟ್ರದಲ್ಲಿ ಎತ್ತುಗಳನ್ನು ಓಡಿಸುವ ಚಕ್ಕಡಿ ಸ್ಪರ್ಧೆಗೆ ಒಪ್ಪಿಗೆ ಸೂಚಿಸಿದೆ.
ತಮಿಳುನಾಡು, ಮಹಾರಾಷ್ಟ್ರ, ಕರ್ನಾಟಕ ಸರ್ಕಾರಗಳು ತಂದಿರುವ ಪ್ರಾಣಿ ಹಿಂಸೆ ತಡೆ ತಿದ್ದುಪಡಿ ಕಾಯ್ದೆಗೆ ಒಪ್ಪಿಗೆ ಸೂಚಿಸಲಾಗಿದೆ. ಈ ಮೂಲಕ ಪ್ರಾಣಿ ಹಿಂಸೆ ಕಾರಣ ನೀಡಿ ಸ್ಪರ್ಧೆಗಳಿಗೆ ವ್ಯಕ್ತವಾಗಿದ್ದ ವಿರೋಧಕ್ಕೆ ಬ್ರೇಕ್ ಬಿದ್ದಂತಾಗಿದೆ.
ಸುಪ್ರೀಂಕೋರ್ಟ್ ತೀರ್ಪನ್ನು ತಮಿಳುನಾಡು, ಮಹಾರಾಷ್ಟ್ರ ಸರ್ಕಾರಗಳು ಸ್ವಾಗತಿಸಿವೆ. ಜಲ್ಲಿಕಟ್ಟು, ಕಂಬಳ, ಚಕ್ಕಡಿ ಸ್ಪರ್ಧೆಗಳನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ. ರಾಜ್ಯಗಳು ತಂದಿರುವ ಪ್ರಾಣಿ ಹಿಂಸೆ ತಡೆ ತಿದ್ದುಪಡಿ ಕಾಯ್ದೆಗೆ ಅನುಮೋದನೆ ನೀಡಿದ್ದು, ಕಾಯ್ದೆಗಳಲ್ಲಿ ಪ್ರಾಣಿ ಹಿಂಸೆ ತಡೆಯಲು ಸಾಕಷ್ಟು ಮಾನದಂಡ ರೂಪಿಸಲಾಗಿದೆ. ನಿಯಮಗಳು ಸೂಕ್ತವಾಗಿದ್ದು, ಇದರಲ್ಲಿ ಮಧ್ಯ ಪ್ರವೇಶ ಮಾಡುವುದಿಲ್ಲವೆಂದು ಅಂತಿಮ ತೀರ್ಪು ನೀಡಲಾಗಿದೆ.