ನವದೆಹಲಿ: ದೇಶಾದ್ಯಂತ ಆಮ್ಲಜನಕ ಸುವ್ಯವಸ್ಥಿತ ವಿತರಣೆಗಾಗಿ ಸುಪ್ರೀಂಕೋರ್ಟಿನಿಂದ ರಾಷ್ಟ್ರೀಯ ಕಾರ್ಯಪಡೆಯನ್ನು ರಚಿಸಲಾಗಿದೆ.
ವೈದ್ಯಕೀಯ ಅಮ್ಲಜನಕವನ್ನು ಸುವ್ಯವಸ್ಥಿತ ರೀತಿಯಲ್ಲಿ ವಿತರಿಸುವುದನ್ನು ಖಚಿತಪಡಿಸಿಕೊಳ್ಳಲು ಶನಿವಾರ ಸುಪ್ರೀಂಕೋರ್ಟ್ 12 ಸದಸ್ಯರ ಕಾರ್ಯಪಡೆಯನ್ನು ರಚನೆ ಮಾಡಿದೆ. ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಡಿವೈಡ್ ಚಂದ್ರಚೂಡ್ ನೇತೃತ್ವದ ನ್ಯಾಯಪೀಠ ಕಾರ್ಯಪಡೆ ರಚಿಸಿದೆ.
ನ್ಯಾಯಾಲಯದಿಂದ ನೇಮಕವಾದ ಕಾರ್ಯಪಡೆ ಗ್ರಾಮೀಣ ಪ್ರದೇಶಗಳಿಗೆ ಅಗತ್ಯವಾದ ಔಷಧ, ವೈದ್ಯಕೀಯ ಆರೈಕೆ, ಆಮ್ಲಜನಕ ಪೂರೈಕೆ ಬಗ್ಗೆ ಕ್ರಮ ಕೈಗೊಳ್ಳಲಿದೆ. ಕೇಂದ್ರದ ಕ್ಯಾಬಿನೆಟ್ ಕಾರ್ಯದರ್ಶಿ ಸಮಿತಿಯ ಕನ್ವೀನರ್ ಆಗಿದ್ದು, ಆರೋಗ್ಯ ಸಚಿವಾಲಯದ ಕಾರ್ಯದರ್ಶಿ ಹಾಗೂ 10 ಮಂದಿ ವೈದ್ಯರನ್ನು ಸಮಿತಿಗೆ ನಿಯೋಜಿಸಲಾಗಿದೆ. ಟಾಸ್ಕ್ ಫೋರ್ಸ್ ನಲ್ಲಿ ಬೆಂಗಳೂರಿನ ಡಾ, ದೇವಿಶೆಟ್ಟಿ ಅವರಿಗೂ ಸ್ಥಾನ ನೀಡಲಾಗಿದೆ.