alex Certify ಮಕ್ಕಳನ್ನು ಶಾಲೆಗೆ ಸೇರಿಸುವ ಪೋಷಕರಿಗೆ ಗುಡ್ ನ್ಯೂಸ್: ಶುಲ್ಕ ಕಡಿಮೆ ಮಾಡಲು ಸುಪ್ರೀಂ ಕೋರ್ಟ್ ಸೂಚನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಕ್ಕಳನ್ನು ಶಾಲೆಗೆ ಸೇರಿಸುವ ಪೋಷಕರಿಗೆ ಗುಡ್ ನ್ಯೂಸ್: ಶುಲ್ಕ ಕಡಿಮೆ ಮಾಡಲು ಸುಪ್ರೀಂ ಕೋರ್ಟ್ ಸೂಚನೆ

ನವದೆಹಲಿ: ಆನ್ಲೈನ್ ಕ್ಲಾಸ್ ನಿಂದಾಗಿ ನಿರ್ವಹಣೆ ವೆಚ್ಚ ಇಳಿಕೆಯಾಗಿರುವುದರಿಂದ ಶಾಲಾ ಶುಲ್ಕ ಕಡಿಮೆ ಮಾಡುವಂತೆ ಕೋರ್ಟ್ ಸೂಚನೆ ನೀಡಿದ್ದು, ಪೋಷಕರಿಗೆ ನೆರವಾಗಲು ತಿಳಿಸಿದೆ.

ದೇಶದಲ್ಲಿ ಕೋವಿಡ್ ಸಾಂಕ್ರಮಿಕ ರೋಗದ ಹಿನ್ನೆಲೆಯಲ್ಲಿ ಆನ್ಲೈನ್ ತರಗತಿಗಳು ಮಾತ್ರ ನಡೆಯುತ್ತಿರುವುದರಿಂದ ಶಾಲಾ ಶುಲ್ಕವನ್ನು ಕಡಿತಗೊಳಿಸಬೇಕೆಂದು ಹೇಳಲಾಗಿದೆ. ಕ್ಯಾಂಪಸ್ನಲ್ಲಿ ಮಕ್ಕಳಿಗೆ ನೀಡಲಾಗುತ್ತಿದ್ದ ಎಲ್ಲಾ ಸೌಲಭ್ಯಗಳು ಮುಚ್ಚಿರುವುದರಿಂದ ನಿರ್ವಹಣೆ ವೆಚ್ಚ ಇಲ್ಲವಾಗಿದೆ. ಹೀಗಾಗಿ ಶೈಕ್ಷಣಿಕ ಸಂಸ್ಥೆಗಳು ವಿದ್ಯಾರ್ಥಿಗಳ ಶುಲ್ಕವನ್ನು ಕಡಿತಗೊಳಿಸಬೇಕು ಎಂದು ಹೇಳಲಾಗಿದೆ.

ಟ್ಯೂಷನ್ ಶುಲ್ಕದಲ್ಲಿ ಶೇಕಡ 30 ರಷ್ಟು ಮನ್ನಾ ಮಾಡಬೇಕು ಎಂದು ರಾಜಾಸ್ಥಾನ ಸರ್ಕಾರ ಹೊರಡಿಸಿದ ಆದೇಶ ಪ್ರಶ್ನಿಸಿ ಖಾಸಗಿ ಅನುದಾನ ರಹಿತ ಶಾಲೆಗಳು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಸಂದರ್ಭದಲ್ಲಿ ಸುಪ್ರೀಂಕೋರ್ಟ್ ನ್ಯಾಯಪೀಠ ಈ ಸೂಚನೆ ನೀಡಿದೆ.

ನ್ಯಾಯಮೂರ್ತಿ ಎಂ.ಎಂ. ಖನ್ವಿಲ್ಕರ್ ಮತ್ತು ನ್ಯಾಯಮೂರ್ತಿ ದಿನೇಶ್ ಮಹೇಶ್ವರಿ ನೇತೃತ್ವದ ಪೀಠ ಶಾಲಾ ಶುಲ್ಕ ಕಡಿಮೆ ಮಾಡಲು ಸೂಚಿಸಿದೆ. ಕೊರೋನಾದಿಂದ ಶಾಲೆಗಳು ತೆರೆಯದ ಕಾರಣ ಡೀಸೆಲ್-ಪೆಟ್ರೋಲ್, ವಿದ್ಯುತ್, ನೀರು, ನಿರ್ವಹಣೆ ವೆಚ್ಚ, ಕಚೇರಿ ಸಾಮಗ್ರಿಗಳಲ್ಲಿ ಆಡಳಿತ ಮಂಡಳಿಗೆ ಉಳಿತಾಯವಾಗುವುದರಿಂದ ಪೋಷಕರ ಹೊರೆ ತಗ್ಗಿಸಬಹುದು ಎಂದು ಹೇಳಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...
Rozsáhlá matematická hádanka Tradiční český recept na rassolnik s ječnou Test pro nejpozornější: Najděte jiný pták do 5 sekund Недопустимые ошибки при еде после тренировки: тренер