alex Certify BIG NEWS: ರಾಜಕೀಯದಲ್ಲಿ ಅಪರಾಧೀಕರಣ ಕಡಿಮೆಗೊಳಿಸುವ ನಿಟ್ಟಿನಲ್ಲಿ ʼಸುಪ್ರೀಂʼ ಮಹತ್ವದ ಹೆಜ್ಜೆ – ಅಭ್ಯರ್ಥಿಗಳ ಘೋಷಣೆಯ 48 ಗಂಟೆಯಲ್ಲಿ ಬಿಡುಗಡೆಯಾಗ್ಬೇಕು ಪ್ರಕರಣಗಳ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ರಾಜಕೀಯದಲ್ಲಿ ಅಪರಾಧೀಕರಣ ಕಡಿಮೆಗೊಳಿಸುವ ನಿಟ್ಟಿನಲ್ಲಿ ʼಸುಪ್ರೀಂʼ ಮಹತ್ವದ ಹೆಜ್ಜೆ – ಅಭ್ಯರ್ಥಿಗಳ ಘೋಷಣೆಯ 48 ಗಂಟೆಯಲ್ಲಿ ಬಿಡುಗಡೆಯಾಗ್ಬೇಕು ಪ್ರಕರಣಗಳ ಮಾಹಿತಿ

ರಾಜಕೀಯ ಅಭ್ಯರ್ಥಿಗಳ ಅಪರಾಧಕ್ಕೆ ಸಂಬಂಧಿಸಿದ ಪ್ರಕರಣವೊಂದರಲ್ಲಿ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಈಗ ಎಲ್ಲಾ ರಾಜಕೀಯ ಪಕ್ಷಗಳು, ಅಭ್ಯರ್ಥಿಗಳ ಘೋಷಣೆಯಾದ 48 ಗಂಟೆಗಳಲ್ಲಿ ಅಭ್ಯರ್ಥಿಗಳ ಪ್ರಕರಣಗಳ ಮಾಹಿತಿಯನ್ನು ಬಿಡುಗಡೆ ಮಾಡಬೇಕೆಂದು ಸುಪ್ರೀಂ ಕೋರ್ಟ್ ಹೇಳಿದೆ. ರಾಜಕೀಯದಲ್ಲಿ ಅಪರಾಧೀಕರಣವನ್ನು ಕಡಿಮೆ ಮಾಡುವುದು ಇದ್ರ ಉದ್ದೇಶವಾಗಿದೆ.

ನ್ಯಾಯಮೂರ್ತಿಗಳಾದ ಆರ್.ಎಫ್. ನಾರಿಮನ್ ಮತ್ತು ಬಿ.ಆರ್. ಗವಾಯಿ ಅವರ ಪೀಠವು, ಫೆಬ್ರವರಿ 13, 2020 ರ ತೀರ್ಪಿನ ನಿರ್ದೇಶನವನ್ನು ಮಾರ್ಪಡಿಸಿದೆ. ಬಿಹಾರ ವಿಧಾನಸಭಾ ಚುನಾವಣೆ ವೇಳೆ, ರಾಜಕೀಯ ಪಕ್ಷಗಳು, ಅಭ್ಯರ್ಥಿಗಳ ಕ್ರಿಮಿನಲ್ ಇತಿಹಾಸವನ್ನು ಪ್ರಕಟಿಸಲು ವಿಫಲವಾಗಿದೆ ಎಂದು ಆರೋಪಿಸಿ ಸಲ್ಲಿಸಲಾದ ನ್ಯಾಯಾಂಗ ನಿಂದನೆ ಅರ್ಜಿ ವಿಚಾರಣೆ ವೇಳೆ ಕೋರ್ಟ್ ಈ ತೀರ್ಪು ನೀಡಿದೆ.

ಸುಪ್ರೀಂ ಕೋರ್ಟ್ ಎಲ್ಲಾ ರಾಜಕೀಯ ಪಕ್ಷಗಳು, ಅಭ್ಯರ್ಥಿಗಳ ಆಯ್ಕೆಯ 48 ಗಂಟೆಗಳ ಒಳಗೆ ಅಥವಾ ನಾಮಪತ್ರ ಸಲ್ಲಿಸುವ ಮೊದಲ ದಿನಾಂಕಕ್ಕೆ ಕನಿಷ್ಠ ಎರಡು ವಾರಗಳ ಮೊದಲು, ತಮ್ಮ ವಿವರಗಳನ್ನು ಪ್ರಕಟಿಸುವಂತೆ ಆದೇಶಿಸಿತ್ತು. ಆದರೆ ಇಂದಿನ ನಿರ್ಧಾರದಲ್ಲಿ, ರಾಜಕೀಯ ಪಕ್ಷಗಳು ಅಭ್ಯರ್ಥಿಗಳನ್ನು ಘೋಷಿಸಿದ 48 ಗಂಟೆಗಳಲ್ಲಿ ಪ್ರಕರಣಗಳನ್ನು ವರದಿ ಮಾಡಬೇಕು ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ.

ವಿಚಾರಣೆಯ ಸಮಯದಲ್ಲಿ, ಚುನಾವಣಾ ಆಯೋಗವು ಅಭ್ಯರ್ಥಿಗಳ ಅಪರಾಧ ಇತಿಹಾಸವನ್ನು ಬಹಿರಂಗಪಡಿಸದ ಪಕ್ಷಗಳ ಚಿಹ್ನೆಗಳನ್ನು ಫ್ರೀಜ್ ಮಾಡಲು ಅಥವಾ ಅಮಾನತುಗೊಳಿಸಲು ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿತ್ತು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...