ವಿಚ್ಛೇದನಕ್ಕಾಗಿ 21 ವರ್ಷಗಳಿಂದ ಕಾನೂನು ಹೋರಾಟ ನಡೆಸುತ್ತಿದ್ದ ದಂಪತಿಯನ್ನು ಸುಪ್ರೀಂ ಕೋರ್ಟ್ ಒಂದು ಮಾಡಿದೆ. ಆಂಧ್ರಪ್ರದೇಶದ ಜೋಡಿ ಮನಸ್ಸು ಬದಲಿಸಲು ಸುಪ್ರೀಂ ಕೋರ್ಟ್ ಯಶಸ್ವಿಯಾಗಿದೆ. ವರದಕ್ಷಿಣೆ ಕಿರುಕುಳದಲ್ಲಿ ಪತಿಗೆ ನೀಡಿದ್ದ ಶಿಕ್ಷೆಯನ್ನು ವಿಸ್ತರಿಸುವಂತೆ ಸಲ್ಲಿಸಿದ್ದ ಅರ್ಜಿಯನ್ನು ಪತ್ನಿ ವಾಪಸ್ ಪಡೆದಿದ್ದಾಳೆ.
ಮುಖ್ಯ ನ್ಯಾಯಮೂರ್ತಿ ಎನ್.ವಿ.ರಾಮನ್ ನೇತೃತ್ವದ ನ್ಯಾಯಪೀಠವು ಪತಿ ಮತ್ತು ಪತ್ನಿಯನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಸಂವಹನ ನಡೆಸಲು ವಿಶೇಷ ಪ್ರಯತ್ನ ನಡೆಸಿತು. ನ್ಯಾಯಮೂರ್ತಿ ಸೂರ್ಯಕಾಂತ್ ಅವರನ್ನೂ ಈ ಪೀಠದಲ್ಲಿ ಸೇರಿಸಲಾಗಿತ್ತು. ಸರ್ವೋಚ್ಚ ನ್ಯಾಯಾಲಯ ಇಂಗ್ಲಿಷ್ ನಲ್ಲಿ ವಿಚಾರಣೆ ನಡೆಯುತ್ತಿದ್ದ ಕಾರಣ ಮಹಿಳೆಗೆ ಇದು ಅರ್ಥವಾಗ್ತಿರಲಿಲ್ಲ. ಹಾಗಾಗಿ ನ್ಯಾಯಾದೀಶರು ತೆಲುಗು ಭಾಷೆಯಲ್ಲಿ ಮಾತನಾಡಿ ತಿಳಿಸಿ ಹೇಳಿದ್ದಾರೆ.
ನ್ಯಾಯಮೂರ್ತಿಗಳು, ಪತಿ ಜೈಲಿಗೆ ಹೋದ್ರೆ ಮಾಸಿಕ ಭತ್ಯೆ ಕೂಡ ಸಿಗುವುದಿಲ್ಲ. ಜೈಲಿನ ಅವಧಿ ವಿಸ್ತರಿಸಿ ಏನು ಮಾಡಬೇಕಿದೆ ಎಂದು ಕೇಳಿದ್ದಾರೆ. ಸಮಸ್ಯೆಯನ್ನು ತಿಳಿಸಿ ಹೇಳಿದ್ದಾರೆ. ಇದನ್ನು ಶಾಂತವಾಗಿ ಕೇಳಿದ ಮಹಿಳೆ, ಜೈಲಿನ ಅವಧಿ ವಿಸ್ತರಣೆ ಅರ್ಜಿಯನ್ನು ವಾಪಸ್ ಪಡೆದಿದ್ದಾಳೆ. ಜೊತೆಗೆ ವಿಚ್ಛೇದನ ಅರ್ಜಿಯನ್ನೂ ವಾಪಸ್ ಪಡೆದಿದ್ದಾಳೆ. ಮಗ ಹಾಗೂ ತನ್ನನ್ನು ಸರಿಯಾಗಿ ನೋಡಿಕೊಳ್ಳಬೇಕೆಂಬ ಷರತ್ತು ವಿಧಿಸಿದ್ದಾಳೆ. ಇಬ್ಬರು ಒಟ್ಟಿಗೆ ಬದುಕಲು ಒಪ್ಪಿದ್ದೇವೆಂದು ಒಪ್ಪಿಗೆ ಪತ್ರ ನೀಡುವಂತೆ ಕೋರ್ಟ್ ಸೂಚನೆ ನೀಡಿದೆ.