alex Certify ‘ಆಧಾರ್’ ಹೊಂದಿದವರಿಗೆ ಮುಖ್ಯ ಮಾಹಿತಿ, ಸರ್ಕಾರಿ ಯೋಜನೆಗೆ ಆಧಾರ್ ಕಾರ್ಡ್ ಬಳಕೆಗೆ ಗ್ರೀನ್‌ ಸಿಗ್ನಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಆಧಾರ್’ ಹೊಂದಿದವರಿಗೆ ಮುಖ್ಯ ಮಾಹಿತಿ, ಸರ್ಕಾರಿ ಯೋಜನೆಗೆ ಆಧಾರ್ ಕಾರ್ಡ್ ಬಳಕೆಗೆ ಗ್ರೀನ್‌ ಸಿಗ್ನಲ್

ನವದೆಹಲಿ: ಸರ್ಕಾರಿ ಯೋಜನೆಗಳಿಗೆ ಆಧಾರ್ ಕಾರ್ಡ್ ಜೋಡಣೆ ಮಾಡುವ ನಿರ್ಧಾರ ಸಂವಿಧಾನ ಬದ್ಧ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

2018 ರಲ್ಲಿ ಈ ಕುರಿತಾಗಿ ನೀಡಲಾಗಿದ್ದ ತೀರ್ಪು ಮರು ಪರಿಶೀಲಿಸಲು ಸಲ್ಲಿಕೆಯಾಗಿದ್ದ ಅರ್ಜಿಗಳನ್ನು 4:1 ಬಹುಮತದೊಂದಿಗೆ ನಿರಾಕರಿಸಿ ವಜಾಗೊಳಿಸಿದೆ. ಇದರಿಂದಾಗಿ ಆಧಾರ್ ಯೋಜನೆ ಸುಪ್ರೀಂಕೋರ್ಟ್ ಓಕೆ ಎಂದಿದೆ.

ಆಧಾರ್ ಕಾರ್ಡ್ ಯೋಜನೆಯನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆ. ಆಧಾರ್ ಕಾರ್ಡ್ ಸಿಂಧುತ್ವದ ಬಗ್ಗೆ ಪ್ರಶ್ನಿಸಿದ ಅರ್ಜಿಯನ್ನು ವಜಾಗೊಳಿಸಿ ಆದೇಶ ಹೊರಡಿಸಿದೆ.

ಮುಖ್ಯ ನ್ಯಾಯಮೂರ್ತಿ ಎಸ್.ಎ. ಬೊಬ್ಡೆ, ನ್ಯಾಯಮೂರ್ತಿಗಳಾದ ಎ.ಎಂ. ಖಾನ್ವಿಲ್ಕರ್, ಡಿ.ವೈ. ಚಂದ್ರಚೂಡ್, ಅಶೋಕ್ ಭೂಷಣ್ ಮತ್ತು ಎಲ್. ನಾಗೇಶ್ವರರಾವ್ ಅವರನ್ನೊಳಗೊಂಡ ನ್ಯಾಯಾಧೀಶರ ಪೀಠದಿಂದ 2018 ರ ಸೆಪ್ಟಂಬರ್ 26 ರಂದು ನೀಡಿದ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯ ಮನವಿ ಆಲಿಸಿ ತೀರ್ಪು ನೀಡಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...